Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ್‌ ಹಿಗ್ಗಾಮುಗ್ಗಾ ವಾಗ್ದಾಳಿ

ಹುಬ್ಬಳ್ಳಿ: ಅಪ್ಪ-ಮಕ್ಕಳಿಬ್ಬರು ಪಕ್ಷದಲ್ಲಿ ಒಬ್ಬೊಬ್ಬರನ್ನು ಕೈ ಬಿಡ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗುಡುಗಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ವಕ್ಫ್‌ ಬೋರ್ಡ್‌ ಬಗ್ಗೆ ಕಾಳಜಿಯಿಲ್ಲ. ಮುಡಾ ಹಾಗೂ ವಾಲ್ಮೀಕಿ ಹಗರಣಗಳ ಬಗ್ಗೆಯೂ ಕಾಳಜಿಯಿಲ್ಲ ಎಂದು ಕಿಡಿಕಾರಿದರು.

ಅವರಿಬ್ಬರಿಗೂ ಸಿಎಂ ಹೇಗೆ ಆಗಬೇಕು? ಹೇಗೆ ಲೂಟಿ ಹೊಡೆಯಬೇಕು ಅನ್ನೋದೇ ಚಿಂತೆ ಎಂದು ಕಿಡಿಕಾರಿದರು.

ಪಕ್ಷದ ವಿರುದ್ಧ ಪ್ರಶ್ನೆ ಮಾಡಿದವರೇ ಮಾರನೇ ದಿನ ಸುದ್ದಿಯಾಗುತ್ತಾರೆ. ಪಕ್ಷದ ಬಗ್ಗೆ ಮಾತನಾಡಿದರೆ ಏನು ತಪ್ಪು. ಅವರನ್ನೇ ಏಕೆ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಅಪ್ಪ-ಮಕ್ಕಳಿಬ್ಬರನ್ನು ನೇರ ಪ್ರಶ್ನೆ ಮಾಡಿದರು.

Tags: