ಮೈಸೂರು: ಮುಡಾ ನಿವೇಶನಗಳಲ್ಲಿ ಅಕ್ರಮ ಆರೋಪದ ಪಟ್ಟಿ ದಿನದಿಂದ ದಿನಕ್ಕೆ ಏರುತ್ತಿವೆ. ಈ ನಡುವೆ ಇದೀಗ ಮುಡಾ 15 ಸಾವಿರಕ್ಕೂ ಅಧಿಕ ನಿವೇಶನಗಳನ್ನು ಹಸ್ತಾಂತರ ಮಾಡದೆ ತನ್ನಲ್ಲೇ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.
ಮುಡಾದಿಂದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಬೇಕಿದ್ದ ಖಾಸಗಿ ಬಡಾವಣೆಗಳನ್ನು ಇನ್ನೂ ಹಸ್ತಾಂತರ ಮಾಡದೇ ಕಚೇರಿಯಲ್ಲೇ ಬಾಕಿ ಉಳಿಸಿಕೊಂಡಿದೆ. ಈ ನಿವೇಶನಗಳನ್ನು ಹಸ್ತಾಂತರ ಮಾಡುವುದಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಒಟ್ಟು 21 ಗ್ರಾಮ ಪಂಚಾಯಿತಿಯ 202 ಸಂಖ್ಯೆಗಳ 15085 ನಿವೇಶನಗಳು ಹಸ್ತಾಂತರವಾಗದೇ ಮುಡಾ ಕಚೇರಿಯಲ್ಲಿಯೇ ಬಾಕಿ ಉಳಿದುಕೊಂಡಿವೆ ಎಂಬ ಮಾಹಿತಿ ಹೊರಬಿದ್ದಿದೆ.
ಮುಡಾ ಕಚೇರಿಯಿಂದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗಬೇಕಿರುವ ಖಾಸಗಿ ಬಡಾವಣೆಗಳು
1. ಮೈಸೂರು ಮಹಾನಗರ ಪಾಲಿಕೆಯ 291 ನಿವೇಶನಗಳು
2. ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 1059 ನಿವೇಶನಗಳು
3. ಹೂಟಗಳ್ಳಿ ನಗರಸಭಾ ಕಾರ್ಯಾಲಯ ವ್ಯಾಪ್ತಿಯ 119 ನಿವೇಶನಗಳು
4. ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 1347 ನಿವೇಶನಗಳು
5. ಬೋಗಾದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2169 ನಿವೇಶನಗಳು
6. ವರುಣಾ ವ್ಯಾಪ್ತಿಯ 1400 ನಿವೇಶನಗಳು
7. ವಾಜಮಂಗಲ ವ್ಯಾಪ್ತಿಯ 1646 ನಿವೇಶನಗಳು
8. ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1050 ನಿವೇಶನಗಳು
9. ಇಲವಾಲ ಗ್ರಾಮ ಪಂಚಾಯಿತಿಯ 1573 ನಿವೇಶನಗಳು
10. ಬೆಳಗೊಳ ಗ್ರಾಮ ಪಂಚಾಯಿತಿಯ 1220 ನಿವೇಶನಗಳು
ಈ ಮೇಲಿರುವ ನಿವೇಶನಗಳಲ್ಲದೆ ಆಲನಹಳ್ಳಿ, ದೇವನೂರು, ಗೋಪಾಲಪುರ, ನಾಗವಾಲ, ಉದ್ಬೂರು, ಸಿಂಧುವಳ್ಳಿ, ರಮ್ಮನಹಳ್ಳಿ, ಮೊಸಂಬಯ್ಯನಹಳ್ಳಿ ವ್ಯಾಪ್ತಿಯ ಸಾವಿರಾರು ನಿವೇಶನಗಳನ್ನು ಮುಡಾ ಕಚೇರಿಯಿಂದ ಹಸ್ತಾಂತರ ಆಗಬೇಕಿದೆ. ಆದಾಗ್ಯೂ ಹಸ್ತಾಂತರಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಇನ್ನಷ್ಟು ದಿನಗಳ ಕಾಲ ವಿಳಂಬವಾಗಲಿದೆ.





