Mysore
29
broken clouds

Social Media

ಗುರುವಾರ, 23 ಜುಲೈ 2026
Light
Dark

ಮಡಿಕೇರಿ| ಆನೆ ದಾಳಿ;ಬೆಳೆ ನಾಶ

ವಿರಾಜಪೇಟೆ: ತಾಲೂಕಿನ ಪೊದಕೋಟೆ ಗ್ರಾಮದ ಮಂಡೆಪಂಡ ಗಣಪತಿ ಎಂಬುವರ ಭತ್ತದ ಗದ್ದೆಗ ನುಗ್ಗಿರುವ ಕಾಡಾನೆಗಳ ಹಿಂಡೊಂದು, ಕಟಾವಿಗೆ ಬಂದಿದ್ದ ಭತ್ತದ ಬೆಳೆಯನ್ನು ನಾಶ ಮಾಡಿವೆ.

ಗ್ರಾಮದ ರೈತ ಮಂಡೆಪಂಡ ಗಣಪತಿ 1.5 ಎಕರೆ ಗದ್ದೆಗೆ ಕಾಡಾನೆಗಳು ಲಗ್ಗೆಯಿಟ್ಟು ಬೆಳೆ ನಾಶಪಡಿಸಿವೆ. ಕಾಡನೆಗಳ ದಾಳಿಯಿಂದಾಗಿ ಕೃಷಿಕರು ಬೆವರು ಸುರಿಸಿ ಬೆಳೆದ ಫಸಲು ಕೈಗೆ ಎಟುಕಾದಂತಾಗಿ ನಷ್ಟ ಅನುಭವಿಸುವಂತಾಗಿದೆ.

ಈ ಬಗ್ಗೆ ಗ್ರಾಮದ ರೈತರು ಅರಣ್ಯಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಒತ್ತಾಯಿಸಿದ್ದಾರೆ.

Tags:
error: Content is protected !!