ಮಡಿಕೇರಿ: ಕಾವೇರಿ ನದಿ ತಟದಲ್ಲಿ ಪ್ರಕೃತಿ ಸೌಂದರ್ಯದ ನಡುವೆ ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವ ಐತಿಹಾಸಿಕ ಶ್ರೀಗುಹ್ಯ ಅಗಸ್ತ್ಯ ದೇವಾಲಯ ಅಪಾರ ಭಕ್ತರ ಇಷ್ಟಾರ್ಥ ಗಳನ್ನು ಈಡೇರಿಸುತ್ತಾ ಭಕ್ತರ ನಂಬಿಕೆಗೆ ಪಾತ್ರವಾಗಿದ್ದು, ಅ. ೨೮ರಿಂದ ನ. ೧ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.
ಕಾವೇರಿಯ ಕುರಿತ ಐತಿಹ್ಯದಲ್ಲಿ ಹೇಳುವಂತೆ ಅಗಸ್ತ್ಯ ಮುನಿಯ ಕಮಂಡಲದಿಂದ ತಪ್ಪಿಸಿಕೊಂಡ ಕಾವೇರಿ ಗುಪ್ತಗಾಮಿನಿಯಾಗಿ ಕುಂಡಿಕೆಯವರೆಗೆ ಹರಿದು ಬರುತ್ತಾಳೆ. ಅಲ್ಲಿಂದ ಬಲಮುರಿ ಮಾರ್ಗ ವಾಗಿ ಗುಹ್ಯ ಗ್ರಾಮಕ್ಕೆ ಬರುವು ದನ್ನು ಅರಿತ ಅಗಸ್ತ್ತ್ಯ ಮುನಿಯು ಗುಹ್ಯ ಗ್ರಾಮದಲ್ಲಿ ಈಶ್ವರನ ವಿಗ್ರಹ ವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾನೆ.
ನಂತರ ಸಪ್ತ ಋಷಿಗಳ ಸಮ್ಮುಖದಲ್ಲಿ ಕಾವೇರಿಯೊಂದಿಗೆ ಸಂಧಾನಕ್ಕೆ ಮುಂದಾ ಗುತ್ತಾನೆ. ಈಗಿನ ದೇವಾಲಯದ ಬಳಿ ಇರುವ ಅರಳಿ ಮರದ ಕೆಳಗೆ ರಾಜಿ ಪಂಚಾಯಿತಿ ನಡೆಯುತ್ತದೆ. ಈ ಸಂದರ್ಭದಲ್ಲಿ ಕಾವೇರಿ ತಾನು ಲೋಕಕಲ್ಯಾಣಕ್ಕಾಗಿ ಮುಂದೆ ಹರಿಯು ವುದಾಗಿ ತಿಳಿಸಿದಾಗ ಸಂಧಾನ ವಿಫಲವಾಗುತ್ತದೆ. ಈ ವೇಳೆ ಅಗಸ್ತ್ತ್ಯ ಮುನಿಯು ಪ್ರತಿಷ್ಠಾಪಿಸಿದ ಈಶ್ವರನನ್ನು ಅಗಸ್ತ್ಯ ಎಂಬ ಹೆಸರಿನಿಂದಲೇ ಕರೆಯಲಾಯಿತು. ಇದಕ್ಕೂ ಮೊದಲು ಸಮೀಪ ದ ವಿಷ್ಣುವಿನ ದೇವಾಲಯ ಇತ್ತು ಎಂದು ಹೇಳಲಾಗುತ್ತದೆ. ಪಂಚಾಯಿತಿ ನಡೆದ ಅರಳಿ ಮರವನ್ನೂ ಸಾರ್ವಜನಿಕರು ಪೂಜಿಸಿ, ಪ್ರಾರ್ಥಿಸುತ್ತಾರೆ.
ಪುರಾಣ ಐತಿಹ್ಯದ ಪ್ರಕಾರ ಕಾವೇರಿಯು ದೇವಾಲಯದ ಬಳಿಯಿಂದ ಗುಪ್ತವಾಗಿ ಹರಿದಿದ್ದ ಕಾರಣ ಗ್ರಾಮಕ್ಕೆ ಗುಹ್ಯ ಎಂಬ ಹೆಸರು ಬಂತು ಎನ್ನಲಾಗಿದೆ. ಉತ್ಸವದ ಕೊನೆಯ ದಿನ ದೇವಾಲಯದ ಅನತಿ ದೂರದಲ್ಲಿರುವ ಕಾವೇರಿ ಗುಪ್ತವಾಗಿ ಹರಿದು ಮತ್ತೆ ಕಾಣಿಸಿಕೊಂಡ ಜಾಗದಲ್ಲಿರುವ ಕಲ್ಲಿನ ಗುಹೆಗೆ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಮತ್ತೊಂದು ಐತಿಹ್ಯದ ಪ್ರಕಾರ ಮಹಾವಿಷ್ಣುವು ಗುಟ್ಟಾಗಿ ಅಡಗಿದ್ದ ಕಾರಣ ಗುಹ್ಯ ಎಂಬ ಹೆಸರು ಬಂತು ಎನ್ನುತ್ತಾರೆ ಗ್ರಾಮದ ಹಿರಿಯರು.
ಸುತ್ತಲೂ ಅಚ್ಚ ಹಸಿರ ಪರಿಸರ, ಸಮೀಪದ ಹರಿಯುವ ಕಾವೇರಿ ನದಿಯ ತಟದಲ್ಲಿರುವ ಈ ದೇವಾಲಯಕ್ಕೆ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ದೀಪಾ ವಳಿಯಂದು ದೇವಾಲಯದಲ್ಲಿ ವಿಶೇಷ ಉತ್ಸವ ನಡೆಯಲಿದ್ದು, ಗ್ರಾಮದಲ್ಲಿ ಹಬ್ಬದ ವಾತಾ ವರಣ ನಿರ್ಮಾಣವಾಗಲಿದೆ. ಇದಲ್ಲದೆ ಮಹಾ ಶಿವರಾತ್ರಿಯಂದೂ ವಿಶೇಷ ಪೂಜೆ ನಡೆಯುತ್ತದೆ. ಭಾಗಮಂಡಲ ಮತ್ತು ಬಲ ಮುರಿ ದೇವಾಲಯಗಳ ನಂತರ ಪಿಂಡ ಪ್ರಧಾನ ಕಾರ್ಯ ನಡೆಯುವ ಮತ್ತೊಂದು ದೇವಾಲಯ ಇದಾಗಿದೆ. ಆಷಾಢ ಮಾಸ, ಮಹಾಲಯ ಅಮಾವಾಸ್ಯೆ ಮತ್ತು ದೀಪಾವಳಿ ಅಮಾವಾಸ್ಯೆಯಂದು ವಿಶೇಷ ಪಿಂಡ ಪ್ರದಾನ ಕಾರ್ಯ ನಡೆಯುತ್ತದೆ.
ಉತ್ಸವದ ಪೂಜೆಗಳು: ಅ. ೨೮ರಂದು ಹುಲಿತಾಳ ಉದಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಉತ್ಸವಕ್ಕೆ ಚಾಲನೆ ದೊರಕಲಿದೆ.
ಅಂದು ಬೆಳಿಗ್ಗೆ ೯. ೩೦ಕ್ಕೆ ಪಂಚ ಗವ್ಯ, ಪುಣ್ಯಾಹ, ಗಣಪತಿ ಹವನ,೧೦. ೩೦ಕ್ಕೆ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಸತ್ಯ ನಾರಾಯಣ ಪೂಜೆ, ಪ್ರಸಾದ ವಿತರಣೆ, ಸಂಜೆ ೬. ೩೦ಕ್ಕೆ ತಕ್ಕರ ಮನೆಯಿಂದ ಭಂಡಾರ ತರುವುದು, ೭. ೩೦ಕ್ಕೆ ಕೊಡಿಮರ ನಿಲ್ಲಿಸುವುದು, ದೇವರ ಸುತ್ತುಬಲಿ, ಅನ್ನಸಂತರ್ಪಣೆ ನಡೆಯಲಿದೆ.
ಅ. ೨೯ ಹಾಗೂ ೩೦ರಂದು ಬೆಳಿಗ್ಗೆ ದೇವರ ಸುತ್ತುಬಲಿ,ಮಧ್ಯಾಹ್ನ ಮಹಾಪೂಜೆ, ಸಂಜೆ ದೇವರ ಸುತ್ತು ಬಲಿ, ಮಹಾಪೂಜೆ,ಅ. ೩೧ರಂದು ಬೆಳಿಗ್ಗೆ ದೇವರ ಸುತ್ತುಬಲಿ, ಮಧ್ಯಾಹ್ನ ಮಹಾಪೂಜೆ, ರಾತ್ರಿ ನೆರಪು ಜಾತ್ರೆ ಸುತ್ತುಬಲಿ, ರಂಗಪೂಜೆ, ವಸಂತ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ನ. ೧ ರಂದು ಬೆಳಿಗ್ಗೆ ದೀಪಾವಳಿ ಅಮಾವಾಸ್ಯೆ ಪಿಂಡ ತಿಲತರ್ಪಣ,ದೇವರಿಗೆ ಮಹಾ ಪೂಜೆ,ಅನ್ನಸಂತರ್ಪಣೆ, ಸಂಜೆ ೪ ಗಂಟೆಗೆ ಸುತ್ತುಬಲಿ ಬಳಿಕ ದೇವರ ಜಳಕ, ಗಂಗಾರತಿ ವಿಜೃಂಭಣೆಯಿಂದ ನೆರವೇರಲಿದೆ.
ಪ್ರಕೃತಿ ಸೌಂದರ್ಯದ ನಡುವೆ ಇರುವ ಅಗಸ್ತ್ತ್ಯ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸ್ಕಂದ ಪುರಾಣ ದಲ್ಲಿ ಉಖವಾಗಿರುವ ಐತಿಹಾಸಿಕ ಶ್ರೀ ಗುಹ್ಯ ಅಗಸ್ತ್ಯ ದೇವಾಲಯದ ವಿಗ್ರಹವು ಅಗಸ್ತ್ತ್ಯ ಮುನಿ ಸ್ಥಾಪಿಸಿzಗಿದೆ. ದೀಪಾವಳಿಯಂದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಗ್ರಾಮಸ್ಥರೂ ಸೇರಿದಂತೆ ಹಲವು ಮಂದಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
– ಎಂ. ಎಸ್. ವೆಂಕಟೇಶ್, ಅಧ್ಯಕ್ಷರು, ಗುಹ್ಯ ಅಗಸ್ತ್ತ್ಯ ಸಹಕಾರ ಸಂಘ,ಸಿದ್ದಾಪುರ
ತುಲಾ ಸಂಕ್ರಮಣದ ನಂತರ ಜಿಯಲ್ಲಿ ನಡೆಯುವ ಮೊದಲ ಜಾತ್ರೆ ಇದಾಗಿದೆ. ಪಿತೃ ತರ್ಪಣ ನಡೆಸುವ ಮೂರು ಪುಣ್ಯ ಕ್ಷೇತ್ರಗಳಲ್ಲಿ ಈ ದೇವಾಲಯವೂ ಒಂದಾಗಿದೆ. ಮಹಾಲಯ, ಆಷಾಢ, ದಿಪಾವಳಿ ಅಮಾವಾಸ್ಯೆಯಂದು ಪಿತೃಗಳಿಗೆ ಪುಣ್ಯ ಪ್ರಾಪ್ತಿಗಾಗಿ ಮತ್ತು ಸದ್ಗತಿಗಾಗಿ ಪಿಂಡ ಹಾಕುವುದು ವಿಶೇಷವಾಗಿದ್ದು, ಇಲ್ಲಿ ಪ್ರತಿದಿನ ಪಿಂಡ ಪ್ರಧಾನ ನಡೆಸಲು ಅವಕಾಶ ಇದೆ.
– ಸುಬ್ರಮಣ್ಯ, ಅರ್ಚಕರು, ಅಗಸ್ತ್ತ್ಯೇಶ್ವರ ದೇವಾಲಯ.
ಗುಹ್ಯ ಅಗಸ್ತ್ಯೇಶ್ವರ ದೇವಾಲಯದ ವಾರ್ಷಿಕ ಹಬ್ಬವು ದೀಪಾವಳಿ ಸಮಯದಲ್ಲಿ ಐದು ದಿನಗಳ ಕಾಲ ನಡೆಯುತ್ತದೆ. ಇಲ್ಲಿನ ತೀರ್ಥ ಸ್ನಾನವು ಬಹಳ ಖ್ಯಾತಿ ಪಡೆದಿದ್ದು, ದೀಪಾವಳಿ ಅಮಾವಾಸ್ಯೆಯಂದು ಕಾವೇರಿ ನದಿಯಲ್ಲಿ ಮಿಂದರೆ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ನರಕ ಚತುರ್ದಶಿಯಂದು ಅಗಸ್ತ್ಯೇಶ್ವರನಿಗೆ ನೆರಪು ಇದ್ದು, ಅಮಾವಾಸ್ಯೆ ಯಂದು ನಡೆಯುವ ಜಳಕದೊಂದಿಗೆ ಉತ್ಸವವು ಸಂಪನ್ನಗೊಳ್ಳುತ್ತದೆ.
-ಬಿ. ಆರ್. ರಾಮಚಂದ್ರರಾವ್, ಅಗಸ್ತ್ಯೇಶ್ವರ ದೇವಸ್ಥಾನದ ಅಧ್ಯಕ್ಷರು





