ನವದೆಹಲಿ: ಇಂದು ಕೂಡ ಹಲವು ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿರುವುದು ವರದಿಯಾಗಿದೆ.
ಈ ಮೂಲಕ 14 ದಿನಗಳಲ್ಲಿ ಒಟ್ಟಾರೆ 350ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಂತಾಗಿದ್ದು, ಪ್ರಯಾಣಿಕರು ಭಾರೀ ಆತಂಕಕ್ಕೆ ಈಡಾಗಿದ್ದಾರೆ.
ವಿಮಾನ ನಿಲ್ದಾಣಗಳಿಗೆ ಇದುವರೆಗೂ ಹೆಚ್ಚಿನ ಬೆದರಿಕೆಗಳು ಸಾಮಾಜಿಕ ಮಾಧ್ಯಮಗಳ ಮೂಲಕವೇ ಬಂದಿರುವುದು ಆತಂಕಕ್ಕಾರಿ ವಿಷಯವಾಗಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಪ್ರತೀ ವಿಮಾನ ನಿಲ್ದಾಣಗಳಿಗೂ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದು, ಎಲ್ಲಾ ಕಡೆ ಸೆಕ್ಯುರಿಟಿ ಹಾಗೂ ಪೊಲೀಸರನ್ನು ನಿಯೋಜನೆ ಮಾಡುವಂತೆ ಸೂಚನೆ ನೀಡಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಯಾರು ಬಾಂಬ್ ಬೆದರಿಕೆ ಹಾಕುತ್ತಿದ್ದಾರೆ ಎಂಬುದನ್ನು ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.





