Mysore
16
broken clouds

Social Media

ಗುರುವಾರ, 02 ಜನವರಿ 2025
Light
Dark

ಮಹಿಳೆಯರು ಸಬಲರಾಗಲು ಸಂಜೀವಿನಿ ಪಾತ್ರ ಮಹತ್ವದ್ದು: ಡಾ. ಅರುಂಧತಿ ಚಂದ್ರಶೇಖರ್

ಮೈಸೂರು: ಸ್ವ-ಸಹಾಯ ಸಂಘದ ಸದಸ್ಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗಲು ಸಂಜೀವಿನಿ ಕಾರ್ಯಕ್ರಮಗಳಾದ ಸುತ್ತು ನಿಧಿ, ಸಮುದಾಯ ಬಂಡವಾಳ ನಿಧಿ ಹಾಗೂ ಸರ್ಕಾರದ ಆರ್ಥಿಕ ನೆರವು ಕಾರ್ಯಕ್ರಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿವೆ ಎಂದು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ತಿಳಿಸಿದರು.

ಶುಕ್ರವಾರ  ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ  ಹಮ್ಮಿಕೊಂಡಿದ್ದ “ದೀಪ ಸಂಜೀವಿನಿ” ಕಾರ್ಯಕ್ರಮವನ್ನು ಉದ್ಟಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 16,407 ಸ್ವ-ಸಹಾಯ ಸ್ತ್ರೀ ಶಕ್ತಿ ಸಂಘಗಳಿದ್ದು, ಸುಮಾರು 2,02,696 ಸದಸ್ಯರಿರುತ್ತಾರೆ. ಸ್ವ-ಸಹಾಯ ಸಂಘದ ಮಹಿಳೆಯರು ಈವರೆಗೆ ಸುಮಾರು 239 ಕೋಟಿ ಆರ್ಥಿಕ ಚಟುವಟಿಕೆ ಮಾಡಿರುವುದು ತುಂಬಾ ಸಂತೋಷದ ವಿಷಯ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ ಗಾಯತ್ರಿ ಮಾತನಾಡಿ, ಜಿಲ್ಲೆಯಲ್ಲಿ ಇರುವ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಮೂಲಕ ಕರಕುಶಲ ಕಲೆ ಬಳಸಿ ದೀಪಗಳನ್ನು ತಯಾರು ಮಾಡಿ ಮಾರಾಟ ಮಾಡಲಾಗುತ್ತಿದೆ. ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚಿ ಆಚರಿಸುವ ಬದಲು ದೀಪ ಹಚ್ಚಿ ಆಚರಿಸಬೇಕು. ಪಟಾಕಿಗಳು ಪರಸರಕ್ಕೇ ಹಾನಿಕಾರಕ ಹಾಗೂ ಶಬ್ದ ಮಾಲಿನ್ಯ ಉಂಟು ಮಾಡುತ್ತದೆ. ಇದರ ಬದಲು ದೀಪವನ್ನು ಹಚ್ಚಿ ಆಚರಿಸಬೇಕು ಎಂದು ಹೇಳಿದರು.

ದೀಪಾವಳಿ ಹಬ್ಬದ ಅಂಗವಾಗಿ ಇಂದಿನಿಂದ ಒಂದು ವಾರಗಳ ಕಾಲ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಆಯೋಜಿಸಿ ಸ್ವ-ಸಹಾಯ ಸಂಘದ ಸದಸ್ಯರ ಆರ್ಥಿಕ ಚಟುವಟಿಕೆಗೆ ಒತ್ತು ನೀಡಿ ಸಾರ್ವಜನಿಕರಿಗೆ ಅರಿವು ಉಂಟು ಮಾಡಿರುವುದು ತುಂಬಾ ಸಂತೋಷದ ಸಂಗತಿ ಎಂದು ಹೇಳಿದರು.

ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ದಿ, ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಅವರ ಸಹಯೋಗದೊಂದಿಗೆ “ದೀಪ ಸಂಜೀವಿನಿ” ಕಾರ್ಯಕ್ರಮವನ್ನು ಇಂದಿನಿಂದ ಒಂದು ವಾರಗಳ ಕಾಲ ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಲಾಗಿದ್ದು, ಸದರಿ ಮಳಿಗೆಗಳನ್ನು ಕೆ ಎಂ ಗಾಯತ್ರಿ ಹಾಗೂ ಕಾರ್ಮಿಕ ಇಲಾಖೆಯ ಆಯುಕ್ತ ಡಾ.ಎಚ್.ಎನ್‌ ಗೋಪಾಲಕೃಷ್ಣ ವೀಕ್ಷಿಸಿದರು.

Tags: