Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಚನ್ನಪಟ್ಟಣ: ಮೈತ್ರಿ ಅಭ್ಯರ್ಥಿ ನಿಖಿಲ್‌ ಆಸ್ತಿ ಬಹಿರಂಗ

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ನಿಖಿಲ್‌ ನಾಮಪತ್ರದಲ್ಲಿ ತಮ್ಮ ಹೆಸರಿನಲ್ಲಿರುವ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ.

ಬೃಹತ್‌ ರೋಡ್‌ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ ನಿಖಿಲ್‌, ನಾಮಪತ್ರದಲ್ಲಿ 113 ಕೋಟಿ ರೂ.ಮೌಲ್ಯದ ಆಸ್ತಿಗೆ ಒಡೆಯರಾಗಿರುವುದಾಗಿ ತಿಳಿಸಿದ್ದಾರೆ.

ಒಟ್ಟು 78.15 ಕೋಟಿ ರೂ.ಮೌಲ್ಯದ ಚರಾಸ್ತಿ, 29.34 ಕೋಟಿ ರೂ. ಸ್ಥಿರಾಸ್ತಿಯನ್ನು ಹೊಂದಿದ್ದು, 1.488 ಕೆ.ಜಿ.ಚಿನ್ನ, 16 ಕೆ.ಜಿ. ಬೆಳ್ಳಿಯನ್ನು ಹೊಂದಿದ್ದಾರೆ. ಅಲ್ಲದೇ 70.44 ಕೋಟಿ ರೂ. ಸಾಲ ಇರುವುದಾಗಿ ನಮೂದಿಸಿದ್ದಾರೆ.

ಪತ್ನಿ ರೇವತಿ ಹೆಸರಲ್ಲಿ 5.49 ಕೋಟಿ ರೂ. ಮೌಲ್ಯದ ಚರಾಸ್ತಿ, 43 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಜೊತೆಗೆ 1.411 ಕೆಜಿ ಚಿನ್ನ, 33.05 ಕೆಜಿ ಬೆಳ್ಳಿ ಹಾಗೂ 13 ಕ್ಯಾರೆಟ್‌ ವಜ್ರವಿದ್ದು, 4.96 ಕೋಟಿ ರೂ. ಸಾಲ ಇರುವುದಾಗಿ ಹೇಳಿದ್ದಾರೆ.

ಇನ್ನೂ ಪುತ್ರ ಆವ್ಯಾನ್‌ ದೇವ್‌ ಹೆಸರಿನಲ್ಲಿ 11 ಲಕ್ಷ ಹಣವಿದೆ. ಅಲ್ಲದೇ, 1 ಇನ್ನೋವಾ ಕ್ರಿಸ್ಟ ಕಾರು, 1 ಇನ್ನೋವಾ ಐ ಕ್ರಾಸ್‌, 1 ರೆಂಜ್‌ ರೋವರ್‌ ಹಾಗೂ ಎರಡೂ ಕ್ಯಾರಾವ್ಯಾನ್‌ ಇದೆ ಎಂದು ನಿಖಿಲ್‌ ಕುಮಾರಸ್ವಾಮಿ ತಮ್ಮ ಆಸ್ತಿವಿವರವನ್ನು ಬಹಿರಂಗಪಡಿಸಿದ್ದಾರೆ.

Tags: