Mysore
14
overcast clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ದೀಪಾವಳಿ ಹಬ್ಬಕ್ಕೆ 7000 ವಿಶೇಷ ರೈಲುಗಳು

ಹೊಸದಿಲ್ಲಿ: ಭಾರತದಾದ್ಯಂತ ರೈಲಿನಲ್ಲಿ ಹೆಚ್ಚಾಗಿ ಪ್ರಯಾಣಿಕರು ಓಡಾಡುವುದು ಸಾಮಾನ್ಯ. ಅದರಲ್ಲೂ ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವುದರಿಂದ ನಿರ್ವಹಣೆಗಾಗಿ ಹೆಚ್ಚಿನ ರೈಲು ವ್ಯವಸ್ಥೆ ಮಾಡಲು ಕೇಂದ್ರ ರೈಲ್ವೆ ಇಲಾಖೆ ತಿರ್ಮಾನಿಸಿದೆ.

ಪ್ರತಿದಿನ 20 ಮಿಲಿಯನ್‌ ಪ್ರಯಾಣಿಕರು ರೈಲಿನಲ್ಲಿ ಓಡಾಡುತ್ತಾರೆ. ಹಬ್ಬಗಳ ದಿನ ಪ್ರಯಾಣಿಕರ ಸಂಖ್ಯೆ ಇನ್ನೂ ಹೆಚ್ಚಾಗುವುದರಿಂದ ಕೇಂದ್ರ ಸರ್ಕಾರ ಪ್ರಯಾಣಿಕರಿಗೆ ದೀಪಾವಳಿ ಆಫರ್‌ ನೀಡಿದೆ. ದೀಪಾವಳಿ ಮತ್ತು ಛಾತ್‌ ಪೂಜೆ ಪ್ರಯುಕ್ತ ದೇಶದ ರೈಲು ಪ್ರಯಾಣಿಕರಿಗೆ ತಮ್ಮ ಊರು ತಲುಪಲು 7000 ವಿಶೇಷ ರೈಲು ವ್ಯವಸ್ಥೆಯನ್ನು ಮಾಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಗುರುವಾರ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.

ರೈಲ್ವೆ ಅಧಿಕಾರಿಗಳ ಪ್ರಕಾರ ಕಳೆದ ಹಬ್ಬದ ಪ್ರಯುಕ್ತ 4500 ವಿಶೇಷ ರೈಲುಗಳನ್ನು ಓಡಿಸಲಾಗಿತ್ತು. ಈ ವರ್ಷವು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ 7000 ರೈಲುಗಳನ್ನು ಓಡಿಸಲು ತಿರ್ಮಾನಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಉತ್ತರ ರೈಲ್ವೆ ಇಲಾಖೆಯ ಪ್ರಕಾರ ಜನರು ತಮ್ಮ ಸ್ಥಳೀಯ ಸ್ಥಳಗಳನ್ನು ತಲುಪಲು ಸುಮಾರು ೩೦೫೦ ವಿಶೇಷ ರೈಲುಗಳ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮೇರೆಗೆ ಭಾತೀಯ ರೈಲ್ವೆ ,2023ರಲ್ಲಿ ವಿಶೇಷ ರೈಲು ಉತ್ಸವ ಮಾಡಿತ್ತು, ಇದಕ್ಕನುಗುಣವಾಗಿ 1082 ವಿಶೇಷ ರೈಲುಗಳನ್ನು ಓಡಿಸುವ ಮೂಲಕ ಓಟ್ಟು 3050 ರೈಲುಗಳ ಓಡಾಟ ನಡೆಸಿದೆ. ಇದು ಶೇಕಡಾ 181ರಷ್ಟು ಹೆಚ್ಚಳವಾಗಿದೆ.

Tags:
error: Content is protected !!