ಮಡಿಕೇರಿ: ಅಪ್ರಾಪ್ತೆಗೆ ಜನಿಸಿದ್ದ ನವಜಾತ ಶಿಶು ನಿಗೂಢ ನಾಪತ್ತೆ ಆಗಿರುವ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅ.17ರಂದು ಅಪ್ರಾಪ್ತೆ ಬಾಲಕಿ ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯಾಗಿ 4 ದಿನ ಕಳೆದರೂ ನವಜಾತ ಶಿಶು ಪತ್ತೆಯಾಗಿಲ್ಲ. ತಾಯಿಯೇ ಮಗುವನ್ನು ನಾಪತ್ತೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹೆರಿಗೆ ನಂತರ ಚಿಕಿತ್ಸೆ ಇಲ್ಲದೆ ಬಾಲಕಿ ಸ್ಥಿತಿ ಗಂಭೀರವಾಗಿತ್ತು. ಆರೋಗ್ಯ ಹದಗೆಟ್ಟ ನಂತರ ಅಧಿಕಾರಿಗಳು ಬಾಲಕಿಯನ್ನು ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ನವಜಾತ ಶಿಶುವನ್ನು ಹುಡುಕದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗರ್ಭಿಣಿಯಾಗಲು 13 ವರ್ಷದ ಬಾಲಕ ಕಾರಣ ಎಂದು ಬಾಲಕಿ ಹೇಳಿದ್ದು, ಸದ್ಯ ಬಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಶಿಶುವಿನ ಡಿಎನ್ಎ ಪರೀಕ್ಷೆಗೆ ಬಾಲಕನ ಪೋಷಕರು ಆಗ್ರಹಿಸಿದ್ದಾರೆ.