Mysore
27
light rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ನಂಜನಗೂಡು ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು:  ನಂಜನಗೂಡು ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗಿದೆ.

ಹಳ್ಳಿಗಳಿಗೆ ನದಿ ಮೂಲದ ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಪರಿಣಾಮ ಜನರು ನದಿ ಹಾಗೂ ಕೆರೆ ನೀರಿನೊಂದಿಗೆ ಕೊಳಬೆ ಬಾವಿಯ ನೀರನ್ನು ಕುಡಿಯಲು ಆಶ್ರಯಿಸುವಂತಾಗಿದೆ.

ನಂಜನಗೂಡು ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಕಪಿಲಾ ನದಿಯಿಂದ ನೀರು ಪೂರೈಸಲಾಗುತ್ತಿದೆ.

ಕಳೆದ ಒಂದೂವರೆ ವರ್ಷದಿಂದ ದುರಸ್ತಿ ನೆಪದಲ್ಲಿ ಘಟಕ ಸ್ಥಗಿತಗೊಂಡಿದ್ದು, ಜನತೆ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಲ್ಲಹಳ್ಳಿ ಸಮೀಪ ಕಪಿಲಾ ನದಿಯಿಂದ 250 ಅಶ್ವಶಕ್ತಿಯ ಮೋಟಾರ್‌ಗಳಿಂದ ನೀರೆತ್ತಿ ಮಾದಾಪುರದಿಂದ ಶುದ್ಧೀಕರಿಸಿ, 288 ಕಿಮೀ ಕುಡಿಯುವ ನೀರಿನ ಮಾರ್ಗದ ಮೂಲಕ 123 ಹಳ್ಳಿಗಳಿಗೆ ನೀರು ಪೂರೈಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನತೆ ಕುಡಿಯುವ ನೀರಿಗಾಗಿ ಜನತೆ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.

 

 

 

 

 

 

 

Tags: