Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ ರಸ್ತೆಯಲ್ಲಿನ ಗುಂಡಿಗಳನ್ನು ಗ್ರಾಮದ ಯುವಕನೋರ್ವ ವಿಡಿಯೋ ಮಾಡಿ ತನ್ನದೇ ಆದ ರೀತಿಯಲ್ಲಿ ವರ್ಣನೆ ಮಾಡಿ ಜನಪ್ರತಿನಿಧಿಗಳನ್ನು ಅಣಕಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ದೃಶ್ಯ ಭಾರಿ ಸದ್ದು ಮಾಡುತ್ತಿದೆ.

ಹನೂರು ತಾಲೂಕಿನ ಮಾರ್ಟಿಳ್ಳಿ ಗ್ರಾಮದ ನಿವಾಸಿ ಸ್ಯಾಮ್ಯುಯೆಲ್ ಎಂಬ ಯುವಕ ತನ್ನ ಗ್ರಾಮದ ಮುಖ್ಯರಸ್ತೆಯಲ್ಲಿರುವ ಆಳೆತ್ತರದ ಗುಂಡಿಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಬಾರಿ ವೈರಲ್ ಆಗುತ್ತಿದೆ.

ವಿಡಿಯೋನಲ್ಲಿ ನೋಡಿ ಆತ್ಮೀಯ ಗೆಳೆಯರೇ ಇದು ಯಾವ ಕೆರೆ ಅಂದುಕೊಂಡಿದ್ದೀರಾ ಇದು ನಮ್ಮ ಊರಿನ ದೊಡ್ಡ ದೊಡ್ಡ ಕೆರೆ ಕಳೆದ ಒಂದು ವರದಿಂದ ಬೀಳುತ್ತಿರುವ ಭಾರಿ ಮಳೆಗೆ ಕೆರೆಗಳೆಲ್ಲ ತುಂಬಿಹೋಗಿದೆ. ಇದರಿಂದ ನಮಗೆ ಸಂತೋಷವಾಗಿದೆ. ಹಲವಾರು ವರ್ಷಗಳಿಂದ ನಮ್ಮ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿತ್ತು ಇದೀಗ ಕೆರೆ ತುಂಬಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ ಅನ್ನಿಸುತ್ತಿದೆ. ಕೆರೆಯ ನೋಡಲು ತುಂಬಾ ಚೆನ್ನಾಗಿ ಇದೆಯಲ್ಲವಾ, ನಮ್ಮ ಊರಿನ ರಸ್ತೆಯಲ್ಲಿ ಹಲವಾರು ಕೆರೆಗಳಿದೆ ಕೆರೆಗಳೆಲ್ಲ ತುಂಬಿರುವುದರಿಂದ ರೈತರಿಗೂ ತುಂಬಾ ಸಂತೋಷವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿರುವುದರಿಂದ ಉತ್ತಮ ಬೆಳೆಯಬಹುದು, ದ್ವಿಚಕ್ರ ವಾಹನ ಸವಾರರು ನಿಧನವಾಗಿ ಪ್ರಯಾಣ ಮಾಡಿ ಎಲ್ಲರೂ ವಿಡಿಯೋವನ್ನು ಬೇರೆಯವರಿಗೂ ಶೇರ್ ಮಾಡಿ ನಮ್ಮ ಕೆರೆಯನ್ನು ನೋಡಿ ಅವರು ಸಹ ಸಂತೋಷ ಕೊಡಲಿ ಎಂದು ವರ್ಣನೆ ಮಾಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಇದುವರೆಗೂ ಈ ವಿಡಿಯೋವನ್ನು ಎರಡು ಸಾವಿರ ಜನರು ವೀಕ್ಷಣೆ ಮಾಡಿದ್ದಾರೆ. ಏಳು ಜನರು ಶೇರ್ ಮಾಡಿದರೆ, 17ಕ್ಕೂ ಹೆಚ್ಚು ಜನರು ಈ ವಿಡಿಯೋಗೆ ವಿಭಿನ್ನ ರೀತಿ ಕಾಮೆಂಟ್ ಮಾಡಿದ್ದಾರೆ.

ಬಂಡಳ್ಳಿ ರಸ್ತೆ ಅದ್ಭುತ ರಸ್ತೆ

ಹನೂರು ತಾಲೂಕು ಕೇಂದ್ರ ಸ್ಥಾನದಿಂದ ಚಂಗವಾಡಿ, ಮಣಗಳ್ಳಿ, ಬಂಡಳ್ಳಿ ಶಾಗ್ಯ ಗ್ರಾಮದ ವರೆಗಿನ ರಸ್ತೆ ತುಂಬಾ ಹದಗಟ್ಟಿರುವುದರಿಂದ ಸದಾಶಿವಪ್ಪ ಬೆಟ್ಟಪ್ಪ ಬಂಡಳ್ಳಿ ಎಂಬುವವರು ಸಾಮಾಜಿಕ ಜಾಲತಾಣ ಮುಖಪುಟದಲ್ಲಿ ಕರುನಾಡು ಬಂಧುಗಳೇ ನಮ್ಮ ರಸ್ತೆ ಅದ್ಭುತ ರಸ್ತೆ ಹನೂರಿನಿಂದ ಶಾಗ್ಯ ಗ್ರಾಮದವರೆಗೆ ರಸ್ತೆಯಲ್ಲಿ ಉತ್ತಮ ತಳಿಯ ಭತ್ತ ಬೆಳೆಯಬಹುದು ಈಗಾಗಲೇ ಮಳೆ ಬಿದ್ದಿರುವುದರಿಂದ ನಾಟಿ ಮಾಡಲು ಸಿದ್ಧವಾಗಿದೆ. ಯಾವುದೇ ರೀತಿಯ ಗೊಬ್ಬರ ಬೇಕಿಲ್ಲ ಎಂದು ಗ್ರಾಮಸ್ಥರನ್ನು ಮಾತನಾಡಿಸಿ ವಿಡಿಯೋ ಹರಿಬಿಟ್ಟಿದ್ದಾರೆ.

Tags: