Mysore
16
few clouds

Social Media

ಬುಧವಾರ, 07 ಜನವರಿ 2026
Light
Dark

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ ಪ್ರಕರಣಕ್ಕೆ ಹೊಸದಾಗಿ ಎನ್‌ಸಿಆರ್‌ ದಾಖಲಾಗಿ ಮತ್ತೊಂದು ಸಂಕಷ್ಟ ಎದುರಾಗಿದೆ.

ನಟ ದರ್ಶನ್‌ 2022ರಲ್ಲಿ ಯುವ ನಿರ್ಮಾಪಕ ಭರತ್‌ ಅವರಿಗೆ ಕರೆ ಮೂಲಕ ಬೆದರಿಕೆ ಹಾಕಿದ್ದರು ಎಂಬ ಆರೋಪದ ಮೇಲೆ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರ ಬಗ್ಗೆ ಭರತ್‌ ಅವರು ಮಾಧ್ಯಮಗಳ ಮುಂದೆ ಕರೆ ಮಾಹಿತಿ ಹಾಗೂ ಕಾಲ್‌ ರೆಕಾರ್ಡ್‌ಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಧ್ರುವನ್‌, ನಟ ದರ್ಶನ್‌ ಹಾಗೂ ದರ್ಶನ್‌ ಅವರ ಮ್ಯಾನೇಜರ್‌ ನಾಗರಾಜು ಮೇಲೆ ಹೊಸದಾಗಿ ಎನ್‌ಸಿಆರ್‌ ದಾಖಲಾಗಿದೆ. ಹೀಗಾಗಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ.

ನಟ ದರ್ಶನ್‌ ಯಾಕೆ ಬೆದರಿಕೆ ಹಾಕಿದ್ದರು?
ನಿರ್ಮಾಪಕ ಭರತ್‌ “ಶ್ರೀ ಕೃಷ್ಣಾʼ ಎಂಬ ನೂತನ ಸಿನಿಮಾವನ್ನು ಪ್ರಾರಂಭಿಸಿದ್ದರು. ಈ ಚಿತ್ರಕ್ಕೆ ನಾಯಕ ನಟನಾಗಿ ಧ್ರುವನ್‌ ಅವರನ್ನು ಆಯ್ಕೆ ಮಾಡೊಕೊಂಡಿದ್ದರು. ಆದರೆ, ಕೋವಿಡ್‌ ಬಂದ ವಿಚಾರವಾಗಿ ಸಿನಿಮಾ ಚಿತ್ರೀಕರಣ ಕೊನೆಗೊಂಡಿತ್ತು. ನಂತರ ಧ್ರುವನ್‌ , ದರ್ಶನ್‌ ಅವರ ಹತ್ತಿರ ಹೋಗಿ ಚಿತ್ರೀಕರಣ ಪ್ರಾರಂಭಿಸುವಂತೆ ಭರತ್‌ ಅವರಿಗೆ ಕರೆ ಮಾಡಿಸಿದ್ದರು. ಆ ಕರೆಯಲ್ಲಿ ಪ್ರಾರಂಭದಲ್ಲಿ ಕೂಲ್‌ ಆಗಿಯೇ ದರ್ಶನ್‌ ಮಾತನಾಡಿ, ಧ್ರುವನ್‌ ನಿಮ್ಮನ್ನೆ ನಂಬಿದ್ದಾನೆ, ಸಿನಿಮಾ ನಿಲ್ಲಿಸಬೇಡಿ ಎಂದು ಮನವಿ ಮಾಡಿದ್ದರು. ಬಳಿಕ ಚಿತ್ರೀಕರಣಕ್ಕೆ ಒಪ್ಪದೆ ಇದ್ದಾಗ ಸಿನಿಮಾ ಮುಗಿಸದೇ ಇದ್ದರೆ, ಭೂಮಿ ಮೇಲೆ ನಿನ್ನನ್ನು ಇಲ್ಲದಂತೆ ಮಾಡಿ ಬಿಡುತ್ತೇನೆ ಎಂದು ಕೆಲವು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಯ ಮಾತುಗಳನ್ನು ಹಾಡಿದ್ದಾರೆ.

Tags:
error: Content is protected !!