Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚಾ. ಬೆಟ್ಟಕ್ಕೆ ಗಂಡಾಂತರ ತರುವ ಕಟ್ಟಡಗಳ ನಿರ್ಮಾಣ ನಿಲ್ಲಿಸಿ

ಮೈಸೂರು: ಚಾಮುಂಡಿಬೆಟ್ಟದ ಸುತ್ತಮುತ್ತ ಇದೀಗ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಸುಮಾರು ೮ ಅಂತಸ್ತಿನ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿದ್ದು, ಈಗಾಗಲೇ ಅಲ್ಲಲ್ಲಿಕುಸಿಯುತ್ತಿರುವ ಬೆಟ್ಟವು ಮುಂದೊಂದು ದಿನ ಕೇರಳದ ವಯನಾಡಿನಂತಹ ಮತ್ತೊಂದು ದುರಂತ ಸಂಭವಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್. ರಘು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಗಾಲ್ಛ್ ಕ್ಲಬ್‌ನಿಂದ ಸುಮಾರು ೫೦೦ ಮೀಟರ್ ದೂರದಲ್ಲಿ ರಾಣಾ ಪ್ರತಾಪ್ ರಸ್ತೆಯಲ್ಲಿ ೮ ಅಂತಸ್ತಿನ ಬೃಹತ್ ವಸತಿ ಸಮುಚ್ಚಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದು ಇಡೀ ಬೆಟ್ಟದ ಸೌಂದರ್ಯವನ್ನೇ ಆಕ್ರಮಿಸಿ ಕೊಳ್ಳುವುದಲ್ಲದೆ ಬೆಟ್ಟಕ್ಕೆ ಬಹುದೊಡ್ಡ ಅಪಾಯವನ್ನು ಉಂಟು ಮಾಡಲಿದೆ. ಹೀಗಾಗಿ, ಇದಕ್ಕೆ ಅನುಮತಿ ನೀಡಿದ ಅಽಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸರ್ಕಾರ ಘೋಷಿಸಿರುವ ಪಾರಂಪರಿಕ ಸ್ಥಳಗಳು ಹಾಗೂ ರಸ್ತೆಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಸ್ತಿತ್ವದಲ್ಲಿರುವ ಪಾರಂಪರಿಕ ರಕ್ಷಣಾ ಸಮಿತಿ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಆದರೆ, ನಗರಪಾಲಿಕೆ ಹಾಗೂ ಮುಡಾ ಅಽಕಾರಿಗಳು ಈ ಸಂಬಂಧ ಪಾರಂಪರಿಕ ಸಮಿತಿ ಅನುಮತಿ ಪಡೆಯದೇ ಕಟ್ಟಡಗಳು ಹಾಗೂ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದು ಸರಿಯಲ್ಲ. ಹಾಗಾಗಿ ಜಿಲ್ಲಾಧಿಕಾರಿ ಕೂಡಲೇ ಮಧ್ಯ ಪ್ರವೇಶಿಸಿ ಪಾರಂಪರಿಕ ಸಂರಕ್ಷಣಾ ಸಮಿತಿಯಿಂದ ಅನುಮತಿ ಪಡೆಯದೆಯೇ ನಿರ್ಮಾಣ ವಾಗುತ್ತಿರುವ ಹಾಗೂ ನಿರ್ಮಾಣವಾಗಿರುವ ಕಟ್ಟಡಗಳ ಅನುಮತಿ ರದ್ದುಪಡಿಸಿ, ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ, ಈ ಕೂಡಲೇ ೮ ಅಂತಸ್ತಿನ ಬೃಹತ್ ವಸತಿ ಸಮುಚ್ಚಯ ನಿರ್ಮಾಣ ಕಾರ್ಯವನ್ನು ತಡೆದು, ಅದಕ್ಕೆ ನೀಡಿರುವ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಮಹೇಶ್, ಅನಿಲ್ ಥಾಮಸ್ ಇತರರಿದ್ದರು.

́ಚಾ. ಬೆಟ್ಟವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿʼ

ಮೈಸೂರು: ಇಡೀ ಚಾಮುಂಡಿಬೆಟ್ಟವನ್ನು ಸಂರಕ್ಷಿಸಬೇಕೆಂದು ಸರ್ಕಾರ ಈಗಾಗಲೇ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಽಕಾರವನ್ನು ಅಸ್ತಿತ್ವಕ್ಕೆ ತಂದು ಇಂದು ಕಾರ್ಯಾರಂಭ ಮಾಡಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧ್ಯಕ್ಷ ರಾಗಿರುವ ಈ ಪ್ರಾಽಕಾರದ ಮೂಲಕ ಬೆಟ್ಟದ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿ, ಇದರ ಸುತ್ತಮುತ್ತಲ ಕನಿಷ್ಠ ೩ ಕಿ. ಮೀ. ಸುತ್ತಳತೆಯಲ್ಲಿ ಯಾವುದೇ ಕಟ್ಟಡ ತಲೆಯೆತ್ತದಂತೆ ತುರ್ತು ಕ್ರಮ ವಹಿಸಬೇಕು. -ಆರ್. ರಘು, ಅಧ್ಯಕ್ಷ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋಚಾ

ಮೃಗಾಲಯವನ್ನು ಸ್ಥಳಾಂತರ ಮಾಡಿ

ಮೈಸೂರು: ಇಲ್ಲಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಸುತ್ತಲಿನ ೫೦ ಮೀಟರ್ ವ್ಯಾಪ್ತಿಯನ್ನು ನಿಶ್ಶಬ್ದ ವಲಯವೆಂದು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಆದೇಶ ಹೊರಡಿಸಿದ್ದಾರೆ. ಅಲ್ಲಿ ಶಬ್ದ ಮಾಲಿನ್ಯದ ಜತೆಗೆ ಪರಿಸರ ಮಾಲಿನ್ಯವೂ ಉಂಟಾಗುತ್ತದೆ. ಆದ್ದರಿಂದ ಮೃಗಾಲಯದ ಸುತ್ತ ಕೇವಲ ನಿಶ್ಶಬ್ದ ವಲಯವೆಂದು ಘೋಷಣೆ ಮಾಡಿದರೆ ಸಾಲದು, ಮೃಗಾಲಯವನ್ನು ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಅಽಕಾರಿಗಳು ಅರಣ್ಯ ಜೀವಿ ಹಕ್ಕು ಉಲ್ಲಂಸಿದ್ದಂತಾಗುತ್ತದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್. ರಘು ಹೇಳಿದರು

Tags: