ಬೆಂಗಳೂರು: ತಮಿಳುನಾಡಿನಲ್ಲಿ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಕೆಲ ರೈಲ್ವೆ ಹಳಿಗಳು ಮಳೆಯಿಂದಾಗಿ ಜಲಾವೃತಗೊಂಡಿರುವ ಕಾರಣ ನೈರುತ್ಯ ರೈಲ್ವೆ ಇಲಾಖೆಯು ಕೆಲ ರೈಲು ಸಂಚಾರವನ್ನು ಬಂದ್ ಮಾಡಿದೆ.
ತಮಿಳುನಾಡು ರಾಜ್ಯದ ಚೈನ್ನೈನ ಬೇಸಿನ್ ಬ್ರಿಡ್ಜ್ ಹಾಗೂ ವ್ಯಾಸರಪಾಡಿ ರೈಲು ನಿಲ್ದಾಣಗಳ ಮಧ್ಯೆಯಿರುವ ನಂ.114ರ ಮೇಲೆ ಮಳೆ ನೀರು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಹೊರಡುವ 10 ರೈಲುಗಳ ಸಂಚಾರವನ್ನು ಇಂದು (ಅ.16) ರೈಲ್ವೆ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವರದಿ ಮಾಡಿದೆ.
ಸಂಚಾರ ಬಂದಾದ ರೈಲುಗಳ ವಿವರ
1.ರೈಲು ಸಂಖ್ಯೆ 12657 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು
2.ರೈಲು ಸಂಖ್ಯೆ 12607 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು
3.ರೈಲು ಸಂಖ್ಯೆ 12608 ಕೆಎಸ್‌ಆರ್ ಬೆಂಗಳೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್
4.ರೈಲು ಸಂಖ್ಯೆ 12609 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು
5.ರೈಲು ಸಂಖ್ಯೆ 12610 ಮೈಸೂರು ಟೂ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್
6.ರೈಲು ಸಂಖ್ಯೆ 12027 ಡಾ.ಎಂಜಿಆರ್ ಚೆನ್ನೈಸೆಂಟ್ರಲ್ ಹಾಗೂ ಕೆಎಸ್‌ಆರ್ ಬೆಂಗಳೂರು
7.ರೈಲು ಸಂಖ್ಯೆ 12028 ಕೆಎಸ್‌ಆರ್ ಬೆಂಗಳೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್
8.ರೈಲು ಸಂಖ್ಯೆ 12007 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು
9.ರೈಲು ಸಂಖ್ಯೆ 12008 ಮೈಸೂರು -ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್
10.ರೈಲು ಸಂಖ್ಯೆ 06275 ಚಾಮರಾಜನಗರ-ಮೈಸೂರು
11.ರೈಲು ಸಂಖ್ಯೆ 20623 ಮೈಸೂರು-ಕೆಎಸ್‌ಆರ್ ಬೆಂಗಳೂರು ಮಾಲ್ಗುಡಿ ಎಕ್ಸ್‌ಪ್ರೆಸ್
12. ರೈಲು ಸಂಖ್ಯೆ 20624 ಕೆಎಸ್‌ಆರ್ ಬೆಂಗಳೂರು-ಮೈಸೂರು ಮಾಲ್ಗುಡಿ ಎಕ್ಸ್‌ಪ್ರೆಸ್
13.ರೈಲು ಸಂಖ್ಯೆ 16022 ಮೈಸೂರು-ಡಾ.ಎಂಜಿಆರ್ ಸೆಂಟ್ರಲ್ ಕಾವೇರಿ ಎಕ್ಸ್‌ಪ್ರೆಸ್
ಈ ಎಲ್ಲಾ ರೈಲುಗಳ ನಡುವೆ ರೈಲ್ವೆ ಸಂಚಾರವನ್ನು ಬಂದ್ ಮಾಡಿದೆ.