ಬೆಂಗಳೂರು: ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರು ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ವೈಯಾಲಿಕಾವಲ್‌ನ ಗೃಹ ಕಚೇರಿಯನ್ನು ಶೋಧನೆ ನಡೆಸಿದ್ದಾರೆ.
ಶಾಸಕ ಮುನಿರತ್ನ ಅವರನ್ನು ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಬಿಡುಗಡೆಯ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿ ವೈಯಾಲಿಕಾವಲ್‌ನ ಗೃಹ ಕಚೇರಿಯನ್ನು ಶೋಧಿಸುವ ಮೂಲಕ ಮುನಿರತ್ನಗೆ ಬಿಗ್‌ಶಾಕ್ ನೀಡಿದೆ.