ಜಮ್ಮು-ಕಾಶ್ಮೀರ: ಇಲ್ಲಿನ ನೂತನ ಸಿಎಂ ಆಗಿ ಓಮರ್ ಅಬ್ದುಲ್ಲಾ ಅವರಿಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶೇರ್ ಇ ಕಾಶ್ಮೀರ ಅಂತರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಓಮರ್ ಅಬ್ದುಲ್ಲಾ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಓಮರ್ ಅಬ್ದುಲ್ಲಾಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರಮಾಣ ವಚನ ಬೋಧಿಸಿದರು.
370 ವಿಧಿ ರದ್ಧತಿಯ ಬಳಿಕ ನಡೆದ ಮೊದಲ ವಿಧಾನಸಭೆಯಲ್ಲಿ ಗೆಲುವು ಸಾಧಿಸಿದ ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಓಮರ್ ಅಬ್ದುಲ್ಲಾ ಅವರು ಮೊದಲ ಸಿಎಂ ಸ್ಥಾನಕ್ಕೇರಿದ್ದಾರೆ.
ಇದಕ್ಕೂ ಮುನ್ನ ಓಮರ್ ಅಬ್ದುಲ್ಲಾ 2009-2014ರಲ್ಲಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.





