Mysore
25
moderate rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಿ: ನಾರಾಯಣ ಗೌಡ

ಮೈಸೂರು: ಸಮಾಜದಲ್ಲಿ ಎಲ್ಲರೂ ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜ ಸೇವೆಯಲ್ಲಿ ತೊಡಗಿ ಕೊಳ್ಳಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ಹೇಳಿದರು.

ನಗರದ ವಿಜಯನಗರದಲ್ಲಿರುವ ಮಲೆ ಮಾದೇಶ್ವರ ಸಂಸ್ಥೆಯ 8ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಎಸ್ ಇ ಗಿರೀಶ್ (ಆರೋಗ್ಯ ಕ್ಷೇತ್ರ), ಡಾಕ್ಟರ್ ರೇಖಾ ಅರುಣ್ (ಸಂಗೀತ ಕ್ಷೇತ್ರ) ಎಂ ಡಿ ಪಾರ್ಥಸಾರಥಿ (ಚಿತ್ರರಂಗ ಕ್ಷೇತ್ರ), ಎ ರವಿ (ಸಾಮಾಜಿಕ ಕ್ಷೇತ್ರ), ರಾಜೇಶ್ ಪಳನಿ (ಉದ್ಯಮ ಕ್ಷೇತ್ರ) ಪ್ರಕಾಶ್ ಪ್ರಿಯದರ್ಶನ್ (ಸಂಘಟನಾ ಕ್ಷೇತ್ರ) ಸನ್ಮಾನಿಸಿ ಅಭಿನಂದಿಸಿ ಅವರು ಮಾತನಾಡಿದರು.

ಯುವ ಜನತೆ ಸಿನಿಮಾ, ಟಿವಿ ಹಾಗೂ ಮೊಬೈಲ್‌ಗಳಿಗೆ ಹೆಚ್ಚು ಆಕರ್ಷಿತವಾಗುತ್ತಿದ್ದು, ಇದು ಸಮಾಜದ ಒಳಿತಿಗೆ ಉತ್ತಮ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.

ಮೈಸೂರು ಸಾಂಸ್ಕೃತಿಕ ಕಲಾವಿದರ ತವರೂರು ಜೊತೆಯಲ್ಲೇ ಇತ್ತಿಚೆಗೆ ಯುವ ಉದ್ಯಮಿಗಳ ನಗರಿಯಾಗಿಯೂ ಬೆಳೆಯುತ್ತಿರುವುದು ಸಂತಸದ ತಂದಿದೆ. ಸಮಾಜದಲ್ಲಿ ವ್ಯಕ್ತಿಗಳು ಬೆಳೆದ ನಂತರ ಸಮಾಜಕ್ಕೆ‌ ಉತ್ತಮ ಕೊಡುಗೆ ಕೊಡಲು ಮುಂದಾಗಬೇಕು. ಮಲೈ ಮಹದೇಶ್ವರ ಸಂಸ್ಥೆಯ ಮೂಲಕ ಗಾಯನ ತಂಡವನ್ನ ಸಂಘಟಿಸಿ ಹವ್ಯಾಸಿ ಕಲಾವಿದರನ್ನ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ಮಲೆ ಮಾದೇಶ್ವರ ಸಂಸ್ಥೆಯ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.

ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ ಮಾತನಾಡಿ, ಮಲೆ ಮಾದೇಶ್ವರ ಸಂಸ್ಥೆ ಕಳೆದ 8 ವರ್ಷಗಳಿಂದ ಯಾವುದೇ ರೀತಿಯ ಅಡೆತಡೆ ಇಲ್ಲದೆ ಕಾರ್ಯ ನಿರ್ವಹಿಸುತ್ತ ಬಂದಿರುವುದು ಹೆಮ್ಮೆಯ ವಿಷಯ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಕೂಡ ಸಂತೋಷದ ಸಂಗತಿ ಎಂದು ಹೇಳಿದರು.

ನಿರೂಪಕ ಮಂಜು ಸಿ ಶಂಕರ್ ಮಾತನಾಡಿ, ಯುವಕರೆಲ್ಲರೂ ಸಂಘಟಿತರಾಗಿ ಸಮಾಜಕ್ಕಾಗಿ ದುಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ, ನಿಮ್ಮ ಸಂಘಟನೆ ಜೊತೆ ಸದಾ ನಾವಿರುತ್ತೇವೆ ಎಂದು ಹೇಳಿದರು

ಈ ವೇಳೆ ಅಜಯ್ ಶಾಸ್ತ್ರಿ, ಮಲೆ ಮಾದೇಶ್ವರ ಸಂಸ್ಥೆಯ ಅಧ್ಯಕ್ಷ ಮಹಾನ್ ಶ್ರೇಯಸ್, ಎಸ್ ಎನ್ ರಾಜೇಶ್, ರಾಕೇಶ್, ಗಾಯಕ ಗುರುರಾಜ್ ಹಾಗೂ ಇನ್ನಿತರರು ಹಾಜರಿದ್ದರು.

Tags: