Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಸತ್ಯದ ಮಾರ್ಗದಲ್ಲಿ ನಡೆಯಲು ಹಿಂಜರಿಕೆ ಏಕೆ : ಜ್ಞಾನ ಪ್ರಕಾಶ್ ಸ್ವಾಮೀಜಿ

ಮೈಸೂರು: ಮೌಢ್ಯದಿಂದ ಹೊರಬಂದು ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿಕೊಟ್ಟಿರುವ ಸತ್ಯದ ಮಾರ್ಗದಲ್ಲಿ ನಡೆಯಲು ಏಕೆ ಹಿಂಜರಿಯುತ್ತೀರಾ, ಬಾಬಾ ಸಾಹೇಬರು ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿರುವ ಮೀಸಲಾತಿ ಬೇಕು, ಆದರೆ ಅವರು ತೋರಿಸಿದ ಧರ್ಮದ ಮಾರ್ಗ ಬೇಡವೇ ಎಂದು ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.

ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧ ಧರ್ಮ ಸಮಿತಿ ವತಿಯಿಂದ ಆಯೋಜಿಸಿದ್ದ ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬೌದ್ಧಧರ್ಮ ದೀಕ್ಷಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬರ ಋಣದಲ್ಲಿ ಬದುಕುತ್ತಿರುವವರು ಸಮಾಜದತ್ತ ಕಿಂಚಿತ್ತೂ ತಲೆಕೆಡಿಸುಕೊಳ್ಳದಿರುವುದು ಬೇಸರದ ಸಂಗತಿ. ಅವಕಾಶವಾದಿಗಳು ಮತ್ತು ಸಮಯ ಸಾಧಕರಿಂದ ಈ ಸಮಾಜಕ್ಕೆ ಹೆಚ್ಚು ಒಡೆತ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾತಿ ವ್ಯವಸ್ಥೆ ಇಂದು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದ್ದು, ಮನುಷ್ಯ ಮನುಷ್ಯರನ್ನು ಪ್ರೀತಿಸುವ ಬದಲು ಜಾತಿಯಿಂದಲೇ ಎಲ್ಲವನ್ನು ಅಳೆಯಲಾಗುತ್ತದೆ. ಪ್ರಾಣಿ ಪಕ್ಷಿಗಳಿಗೆ ಜಾತಿ ಇರುತ್ತದೆ. ಪ್ರಾಣಿಗಳ ಹೆಜ್ಜೆ ಗುರುತು ಬೇರೆ ಬೇರೆ ಇರುತ್ತವೆ. ಇದರಿಂದ ಇಂತಹ ಪ್ರಾಣಿಯ ಹೆಜ್ಜೆ ಗುರುತು ಎಂದು ಹೇಳಬಹುದು. ಆದರೆ ಮನುಷ್ಯರ ಹೆಜ್ಜೆ ಗುರುತುಗಳು ಒಂದೇ ಅಲ್ಲವೇ. ಇದರಲ್ಲಿ ಹೇಗೆ ಜಾತಿ ಹುಡುಕುತ್ತಿರಾ? ನಮ್ಮೊಳಗಿನ ಅಜ್ಞಾನದಿಂದ ಜಾತಿಯ ಬೇರು ಇನ್ನು ಬೇರೂರಿದೆ ಎಂಬ ವೈಜ್ಞಾನಿಕ ಸತ್ಯವನ್ನು ಜಗತ್ತಿಗೆ ಸಾದರಪಡಿಸಿದ ಮಹಾನ್ ಜ್ಞಾನಿ ಗೌತಮ ಬುದ್ಧರು ಎಂದು ಹೇಳಿದರು.

ಇದೇ ವೇಳೆ ಮೈಸೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ. ದೀಪಕ್ ಹಾಗೂ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ನೂತನ ನಿರ್ದೇಶಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಎಚ್.ಶಿವರಾಜ್, ಎಂ.ಸಾವಕಯ್ಯ, ಬೆಂಗಳೂರು ಯೋಜನಾ ಇಲಾಖೆಯ ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಿ. ಚಂದ್ರಶೇಖರಯ್ಯ, ಸಮಿತಿಯ ಅಧ್ಯಕ್ಷರಾದ ಪ್ರೊ.ಡಿ.ನಂಜುಂಡಯ್ಯ, ನಿವೃತ್ತ ಇಂಜಿನಿಯರ್ ಆರ್.ನಟರಾಜ್, ಮಾಜಿ ಮೇಯರ್ ಪುರುಷೋತ್ತಮ್, ರಾಜು ಹಂಪಾಪುರ, ಪುಟ್ಟಸ್ವಾಮಿ, ರಾಜಮ್ಮ, ಬಿ.ಗಾಯತ್ರಿದೇವಿ, ಕೆ.ಎಂ.ಪುಟ್ಟು, ಎಂ.ಕೆ. ದಾಸ್, ಬಿ.ಬೋರಯ್ಯ, ಎಂ.ಬಸವರಾಜು, ನಿಸರ್ಗ ಸಿದ್ದರಾಜು, ಪಿ. ನಿರಂಜನ್, ಕೇಶವಯ್ಯ, ಸಣ್ಣಯ್ಯ, ಲಿಂಗಣ್ಣಯ್ಯ, ಅಹಿಂದ ಜವರಪ್ಪ, ಡಾ.ಎಚ್.ಎಲ್. ವೆಂಕಟೇಶ್, ಎಸ್. ಗೋಪಾಲ್, ರಮೇಶ್, ಬಾಲಕೃಷ್ಣ, ಡಾ.ಪ್ರೇಮ್ ಕುಮಾರ್, ಗಂಗಾಧರ್, ಕೆ. ಮಹದೇವಯ್ಯ, ಎಂ.ರುದ್ರಯ್ಯ, ಡಾ. ಮಂಗಳಮೂರ್ತಿ, ಡಾ. ಚನ್ನಕೇಶವಮೂರ್ತಿ, ತುಂಬಲರಾಮಣ್ಣ, ಡಿ. ಮಹದೇವಯ್ಯ, ರೂಪೇಶ್, ವಿಜಯ್, ವಿಶಾಲ್, ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

Tags: