Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ದರ್ಶನ್‌ ಜಾಮೀನು ಅರ್ಜಿ ವಜಾ: ದಾಸನಿಗೆ ಜೈಲೇ ಗತಿ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಆಗಿದೆ. ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನಗರದ 57ನೇ ಸಿಸಿಎಚ್‌ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಆ ಮೂಲಕ ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಬಿಗ್‌ ಶಾಕ್‌ ಆಗಿದೆ.

ಇದರಿಂದ ದರ್ಶನ್‌ ಬಳ್ಳಾರಿ ಜೈಲೇ ಅನಿವಾರ್ಯವಾಗಿದೆ. ಅವರು ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.

ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್‌ ಜೂನ್‌11ರಲ್ಲಿ ಅರೆಸ್ಟ್‌ ಆದರು. ಬಳಿಕ ಅವರನ್ನು ಬೆಂಗಳೂರಿನ ಪರಪ್ಪನ ಕಾರಾಗೃಹದಲ್ಲಿ ಇರಿಸಲಾಗಿತ್ತು. ಅಲ್ಲಿ, ಅವರು ಐಷರಾಮಿ ವ್ಯವಸ್ಥೆ ಪಡೆದ ಕಾರಣ ದರ್ಶನ್‌ನ್ನು ದರ್ಶನ್‌ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಯಿತು. ಇದೀಗ, ಈ ತೀರ್ಪಿನಿಂದ ಅವರಿಗೆ ಬಳ್ಳಾರಿ ಜೈಲೇ ಗತಿಯಾಗಿದೆ.

ಇನ್ನೂ ದರ್ಶನ್‌ಗೆ ಜಾಮೀನು ಸಿಗದಿರೋ ಕಾರಣ ಅನಾರೋಗ್ಯ ಕಾರಣ ನೀಡಿ ಅವರು ಬೆಂಗಳೂರಿನ ಜೈಲಿಗೆ ಶಿಫ್ಟ್‌ ಆಗುವ ಸಾಧ್ಯತೆ ಇದೆ. ಈಗಾಗಲೇ ಕುಟುಂಬಸ್ಥರು ಮೆಡಿಕಲ್‌ ವರದಿ ಸಿದ್ಧ ಮಾಡಿಕೊಂಡಿದ್ದು, ಅನಾರೋಗ್ಯದ ಕಾರಣ ನೀಡಿ ಬೆಂಗಳೂರಿಗೆ ಶಿಫ್ಟ್‌ ಆಗಲು ಸಕಲ ವ್ಯವಸ್ಥೆ ನಡೆದಿದೆ ಎನ್ನಲಾಗಿದೆ.

Tags:
error: Content is protected !!