ಬೆಂಗಳೂರು: ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ಸುಮಾರು 1,78,173 ರೂ ಕೋಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಬಿಜೆಪಿಯು ತನ್ನ ಮಿತ್ರಪಕ್ಷಗಳಿಗೆ ಸಿಂಹಪಾಲು ನೀಡಿದೆ.
ಆಯಾ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಹಣದಲ್ಲಿ ಬಾಕಿ ಇರುವ ನಿಯಮಿತ ಕಂತಿನ ಜೊತೆಗೆ ಒಂದು ಮುಂಗಡ ಕಂತು ಸೇರಿದೆ. ಇದರಿಂದ ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿಯು ವೇಗಗೊಳಿಸಿಕೊಳ್ಳಲು ಸಹಾಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ ರೂ.31.862 ಕೋಟಿ, ರಾಜಸ್ಥಾನಕ್ಕೆ ರೂ.10,737 ಕೋಟಿ, ಮಧ್ಯಪ್ರದೇಶಕ್ಕೆ ರೂ.13,987ಕೋಟಿ, ಛತ್ತೀಸ್‌ಗಢಕ್ಕೆ ರೂ.6,070. ಗುಜಾರಾತ್‌ಗೆ ರೂ.6,117 ಕೋಟಿ, ಒಡಿಶಾಗೆ ರೂ.8,068 ಕೋಟಿ ನೀಡಲಾಗಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಾದ ಬಿಹಾರಕ್ಕೆ ರೂ.17,921 ಕೋಟಿ, ಮಹಾರಾಷ್ಟ್ರಕ್ಕೆ ರೂ.11,255ಕೋಟಿ, ಆಂಧ್ರಪ್ರದೇಶಕ್ಕೆ ರೂ.7,211ಕೋಟಿ ನೀಡಿದೆ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿರುವ ಹಾಗೂ ಇತರೆ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಮೊತ್ತ ಕಡಿಮೆ ಇದೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಾದ ಕರ್ನಾಟಕಕ್ಕೆ ರೂ.6,498ಕೋಟಿ, ತೆಲಂಗಾಣಕ್ಕೆ 3,745 ಕೋಟಿ, ಹಿಮಾಚಲಪ್ರದೇಶಕ್ಕೆ 1,479 ಕೋಟಿ ಬಿಡುಗಡೆ ಮಾಡಲಾಗಿದೆ. ಟಿಎಂಸಿ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳಕ್ಕೆ ರೂ.13,404ಕೋಟಿ, ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡಿಗೆ ರೂ.7,268ಕೋಟಿ, ಕೇರಳಕ್ಕೆ ರೂ.3430ಕೋಟಿ ನೀಡಲಾಗಿದೆ.