Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅನುಯಾಯಿಗಳ ದೀಕ್ಷಾಭೂಮಿ ಯಾತ್ರೆಗೆ ಚಾಲನೆ

ಮೈಸೂರು: ಭಾರತ ಭಾಗ್ಯವಿಧಾತ, ಸಂವಿಧಾನ ಶಿಲ್ಪಿ ಡಾ.ಬಿ. ಆರ್‌ ಅಂಬೇಡ್ಕರ್‌ ಅವರು ಬೌದ್ಧ ಧರ್ಮಕ್ಕೆ ದೀಕ್ಷೆ ಪಡೆದ ಸ್ಥಳಾವಾದ ಮಹಾರಾಷ್ಟ್ರದ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಜಿಲ್ಲೆಯಿಂದ ಈ ಬಾರಿ 325 ಅನುಯಾಯಿಗಳನ್ನು ಏಳು ವೋಲ್ಲೊ ಬಸ್ಸುಗಳಲ್ಲಿ ಕಳುಹಿಸಲಾಯಿತು.

ಗುರುವಾರ ಕಾಡ ಕಚೇರಿ ಬಳಿ ಬೆಳಗ್ಗೆ 10.30 ಕ್ಕೆ ಯಾತ್ರಾರ್ತಿಗಳು ಬಸ್‌ಗಳಿಗೆ ನೀಲಿ ನಿಶಾನೆ ತೋರುವುದರ ಮೂಲಕ ಶಾಸಕ ದರ್ಶನ್‌ ಧ್ರುವನಾರಾಯಣಾ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪ್ರವರ್ತನ ದಿನ ಅತ್ಯಂತ ಪವಿತ್ರವಾಗಿದ್ದು ಕರ್ನಾಟಕ ಸರ್ಕಾರವು ಅಂಬೇಡ್ಕರ್ ಅನುಯಾಯಿಗಳನ್ನು ನಾಗಪುರಕ್ಕೆ ಕಳಿಸುವ ದೃಷ್ಟಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಕರ್ನಾಟಕದ ಪ್ರತಿಷ್ಠಿತ ಕಾರ್ಯಕ್ರಮವಾದ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಅನುಯಾಯಿಗಳನ್ನು ಕಳಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಪ್ರತಿವರ್ಷ ಮಹಾರಾಷ್ಟ್ರದ ನಾಗಪುರ ದೀಕ್ಷಾಭೂಮಿಗೆ ಯಾತ್ರಾರ್ತಿ ಗಳನ್ನು ಕಳಿಸಲಾಗುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿಜಯ ದಶಮಿ ದಿನದಂದು ಬೌದ್ಧ ಧರ್ಮಕ್ಕೆ ಪರಿವರ್ತನೆಗೊಂಡ ದಿನವನ್ನು ನಾಗಪುರದಲ್ಲಿ ಬಹಳ ಅರ್ಥಪೂರ್ಣವಾಗಿ “ಪ್ರವರ್ತನ ದಿನ”ವೆಂದು ಆಚರಿಸಲಾಗುತ್ತದೆ. ಆ ದಿನದಂದು ಭಾರತದ ನಾನಾ ಭಾಗಗಳಿಂದ ಅಂಬೇಡ್ಕರ್ ಅನುಯಾಯಿಗಳು ಮಹಾರಾಷ್ಟ್ರದ ನಾಗಪುರಕ್ಕೆ ಆಗಮಿಸುತ್ತಾರೆ. ಸಮಾಜ ಕಲ್ಯಾಣ ಇಲಾಖೆಯು ಪ್ರತಿ ವರ್ಷ ಕರ್ನಾಟಕದಲ್ಲಿನ ಅಂಬೇಡ್ಕರ್ ಅನುಯಾಯಿಗಳನ್ನು ಪ್ರತಿ ವರ್ಷ ವಿಜಯದಶಮಿ ಹಿಂದಿನ ಎರಡು ದಿನ ಮೊದಲು ವಿವಿಧ ಜಿಲ್ಲೆಗಳಿಂದ ಕಳಿಸಲಾಗುತ್ತದೆ. ಯಾತ್ರಾರ್ತಿಗಳು ವಿಜಯದಶಮಿ ದಿನದಂದು ಅಲ್ಲಿಗೆ ತಲುಪುತ್ತಾರೆ.. ಈ ಬಾರಿ 2024- 25ನೇ ಸಾಲಿಗೆ ಕರ್ನಾಟಕದಿಂದ ಒಟ್ಟು 7700 ಜನ ಯತ್ರಾರ್ತಿಗಳನ್ನು ಕಳಿಸಲಾಗುತ್ತಿದೆ.. ಅದರಲ್ಲಿ ಮೈಸೂರು ಜಿಲ್ಲೆಗೆ 325 ಗುರಿಯನ್ನು ನಿಗದಿಪಡಿಸಲಾಗಿದ್ದು 450 ಅರ್ಜಿಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿದ್ದವು. ಅದರ ಪೈಕಿ ಅಂತಿಮವಾಗಿ 325 ಮಂದಿಯನ್ನು ಕಳುಹಿಸಿಕೊಡಲಾಗುತ್ತಿದೆ.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ. ಬಿ ಹಾಗೂ AVSS ಸಹಕಾರ ಸಂಘದ ಮುಖಂಡರಾದ ತುಂಬಲ ರಾಮಣ್ಣನವರು ಡಿಎಸ್ಎಸ್ ಮುಖಂಡರಾದ ಮಲಿಯೂರು ಸೋಮಣ್ಣನವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ತಾಲೂಕುಗಳ ಸಹಾಯಕ ನಿರ್ದೇಶಕರು, ವಾರ್ಡನ್ ಗಳು ಹಾಜರಿದ್ದರು.

Tags: