Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಎಳನೀರು ಮಾರುಕಟ್ಟೆಗೆ ಬೇಡಿಕೆ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಎಳನೀರು ಮಾರುಕಟ್ಟೆ ಸ್ಥಾಪಿಸಬೇಕೆಂಬ ಕೂಗಿಗೆ ಇದೀಗ ಬಲ ಬಂದಿದ್ದು, ರೈತರಿಗೂ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

ಚಾಮರಾಜನಗರದಲ್ಲಿ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ವಾಣಿಜ್ಯ ಬೆಳೆಗಳ ಪೈಕಿ ತೆಂಗು ಅಗ್ರಸ್ಥಾನದಲ್ಲಿದೆ.

ನಗರದಲ್ಲಿ ಬೆಳೆಯುವ ಎಳನೀರು, ತೆಂಗಿನಕಾಯಿಯನ್ನು ಹೊರ ರಾಜ್ಯಗಳಿಗೆ ಪೂರೈಸಲಾಗುತ್ತದೆ. ಹಾಗಾಗಿ ಆ ಪೂರೈಕೆ ಸರ್ಕಾರದ ಮೂಲಕವೇ ಆಗಲಿ, ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂಬ ಒತ್ತಾಯ ಕೇಳಿ ಬಂದಿದೆ.

ಚಾಮರಾಜನಗರದ ಸಂತೇಮರಹಳ್ಳಿ ಎಪಿಎಂಸಿ ಪ್ರಾಂಗಣದಲ್ಲಿ ಎಳನೀರು ಮಾರುಕಟ್ಟೆಯನ್ನು ಸ್ಥಾಪಿಸಬೇಕು. ಈ ಎಪಿಎಂಸಿ ಮಾರುಕಟ್ಟೆ ವಿಶಾಲವಾಗಿದ್ದು, ಎಳನೀರು ಮಾರುಕಟ್ಟೆಯನ್ನು ಸ್ಥಾಪಿಸಿದರೆ ಜಿಲ್ಲೆಯ ತೆಂಗು ಬೆಳೆಗಾರರು ಮಧ್ಯವರ್ತಿಗಳನ್ನು ಅವಲಂಬಿಸುವುದು ತಪ್ಪಲಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಎಳನೀರು ಮಾರುಕಟ್ಟೆ ಸ್ಥಾಪಿಸಿದರೆ ಅನ್ನದಾತರಿಗೆ ಅಧಿಕ ಲಾಭವೂ ಹೆಚ್ಚಾಗಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ಮತ್ತೆ ಉತ್ತಮ ಸ್ಥಿತಿಯಲ್ಲಿದ್ದು, ಜಿಲ್ಲೆಯಲ್ಲಿರುವ ತೆಂಗಿನ ತೋಟಗಳಿಂದ ಎಳನೀರು ಉತ್ತಮ ಇಳುವರಿ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ತೆಂಗಿನ  ಮಾರುಕಟ್ಟೆ ಸ್ಥಾಪನೆಯಾದರೆ ಅನ್ನದಾತರಿಗೆ ತೀವ್ರ ಅನುಕೂಲವಾಗಲಿದ್ದು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

 

Tags: