Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯುವ ದಸರಾ: ರಂಜಿಸಿದ ರೆಹಮಾನ್, ವಿಜಯ್ ಪ್ರಕಾಶ್ ಜೋಡಿ

  • ಎ.ಆರ್ ರೆಹಮಾನ್ ಗಾಯನಕ್ಕೆ ಕುಣಿದು ಕುಪ್ಪಳಿಸಿದ ಯುವ ಸಮೂಹ….
  • ಇಂಟರ್ ನ್ಯಾಷನಲ್ ಕಾನ್ಸರ್ಟ್ ನಂತೆ ಮೂಡಿ ಬಂದ ಯುವ ದಸರಾ….
  • ಭೋರ್ಗರೆದು ಸೇರಿದ ಜನ ಸಾಗರ….

ಮೈಸೂರು: ಯುವ ದಸರಾದ ನಾಲ್ಕನೇ ದಿನವಾದ ಬುಧವಾರ ರಾತ್ರಿ ವೇದಿಕೆಯಲ್ಲಿ ಹಾಡು-ಅದ್ದೂರಿ ಬ್ಯಾಂಡ್‌ ತಂಡಗಳು ಮೇಳೈಸಿದವು. ಖ್ಯಾತ ಸಂಗೀತ ಸಂಯೋಜಕ ಎ.ಆರ್‌ ರೆಹಮಾನ್‌, ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಹಾಡುಗಳು ಯುವಜನರ ಸಂಭ್ರಮಕ್ಕೆ ಕಿಚ್ಚು ಹಚ್ಚಿದವು.

ಮೊದಲಿಗೆ ʻಜೈಹೋ ಜೈಹೋʼ ಎನ್ನುತ್ತಾ ವೇದಿಕೆ ಪ್ರವೇಶಿಸಿದ ಸಂಗೀತ ನಿರ್ದೇಶಕ ಮತ್ತು ಸಂಯೋಜಕ ಎ ಆರ್ ರೆಹಮಾನ್ ಕಂಠ ಸಿರಿಯೂ ಜನರ ಮನಗೆದ್ದಿತು. ಖ್ಯಾತ ಡ್ರಮ್ಮರ್‌ ಶಿವಮಣಿ ತಮ್ಮ ಪ್ರತಿಭೆಯ ಮೂಲಕ ಸಂಗೀತ ಲೋಕವನ್ನೇ ಸೃಷ್ಟಿಸಿದರು.

ʻಮುಕ್ಕಾಲಾ ಮುಕ್ಕಾಬುಲಾ ಲೈಲಾʼ ಹಾಡಿಗೆ ನೆರದಿದ್ದವೂ ದನಿಗೂಡಿಸಿದರು. ಗೀತೆಯ ಜೊತೆಗೆ ಯುವ ಮನಸ್ಸುಗಳು ಹೆಜ್ಜೆಗೆ ತಾಳ ಹಾಕಿದರು.

ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರನ್ನು ರೆಹಮಾನ್‌ ವೇದಿಕೆಗೆ ಕರೆಯುತ್ತಿದ್ದಂತೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗಳು ಸಹ ದನಿಗೂಡಿಸಿದವು.

ʻರಾಮ ನಿನ್ನ ಮನದಲ್ಲಿ, ರಾಮ ನನ್ನ ಮನದಲ್ಲಿʻ ಎನುವ ಮೂಲಕ ತಮ್ಮ ಸುಮಧುರ ಕಂಠದಿಂದ ತಮ್ಮೂರಿನ ಜನರ ಮನಸೆಳೆದ ವಿಜಯ್‌ ಪ್ರಕಾಶ್‌ ಬಳಿಕ ಭಾವುಕರಾದರು.

ʻಎನ್ನ ಸೋ ನಾ ಕ್ಯೂ ರಬ್ನೇ ಬನಾಯʼ ʻಮಾಸಕ್ಕಲಿ.. ಮಸಕ್ಕಲಿʼ ಹೀಗೆ ಮೊದಲಾದ ಹಾಡುಗಳು ಸಂಗೀತ ಪ್ರೇಮಿಗಳ ಮನಸೊರೆಗೊಂಡವು.

ಪ್ರಖ್ಯಾತ ಡ್ರಾಂ ಬಿಟ್ಟರ್ ಶಿವಮಣಿ ತಮ್ಮ ಬ್ಯಾಂಡ್ ಮೂಲಕ ಯುವ ದಸರೆಗೆ ಮೆರುಗು ತಂದರು. ಸತತ 20 ನಿಮಿಷಗಳು ಯುವಕರಿಗೆ ಕೊರತೆಯಾಗದಂತೆ ಬ್ಯಾಂಡ್ ಬಾರಿಸುತ್ತಾ ಕೇಳುಗರ ಕಿವಿ ದಿಂ ಏನುವಂತೆ ಮಾಡಿದರು. ಪ್ರತಿಯೊಂದು ಬಿಟ್ಟ್ ಗಳಿಗೂ ಯುವ ಸಮೂಹ ಕುಣಿಯಲಾರಂಭಿಸಿತ್ತು, ಬಿಟ್ಸ್ ಗೆ ತಕ್ಕಂತೆ ಹೆಜ್ಜೆ ಜೊತೆಗೆ ಚಪ್ಪಾಳೆ ಶಿಳ್ಳೆ ಕೇಕೆ ಹಾಕುತ್ತಾ ರಿದಂ ಎಂಜಾಯ್ ಮಾಡಿದರು.

ಸಾಗರೋಪದಿಯಲ್ಲಿ ಹಾರಿದು ಬಂದ ಜನ ಸಾಗರ
ಯುವ ದಸರಾ ಕಾರ್ಯಕ್ರಮ ಆರಂಭವಾಗಿ 3 ದಿನ ಕಳೆದಿದೆ ಆದರೆ ಯುವ ದಸರಾದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಕಂಡಂತಹ ಜನಸಾಗರ ಇಂದೆಂದು ನೋಡಿರದ ರೀತಿಯಲ್ಲಿ ಜನಸ್ಥೋಮವು ಹರಿದು ಬಂದಿದ್ದು ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಗೆ ಕಷ್ಟ ಸಾಧ್ಯವಾಗಿದೆ. ಸಂಜೆ 5 ಗಂಟೆಯಿಂದಲ್ಲೇ ಹೊರವಲಯ ರಸ್ತೆಯ ತುಂಬಾ ಜನ ಸಾಗರ ತುಂಬಿ ತುಳುಕುತ್ತಿತ್ತು ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೂ ಕೂಡ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.

Tags: