Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸರ್ಕಾರ ತನ್ನ ಅಧಿಕಾರ ಮುಗಿಯುವವರೆಗೂ ಗಟ್ಟಿಯಾಗಿರಲಿದೆ: ಸತೀಶ್‌ ಜಾರಕಿಹೊಳಿ

ಚಿಕ್ಕಮಗಳೂರು: ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳುಗಳಿಂದ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ. ಇದರಿಂದ ಸರ್ಕಾರ ಬೀಳುತ್ತದೆ ಎಂದು ವಿರೋಧ ಪಕ್ಷದವರು ಹೇಳುತ್ತಲೇ ಇರುತ್ತಾರೆ. ಅವರು ಹೇಳಿದ ಕೂಡಲೇ ಸರ್ಕಾರ ಬೀಳುವುದಿಲ್ಲ. ಸರ್ಕಾತ ತನ್ನ ಅಧಿಕಾರ ಮುಗಿಯುವರೆಗೂ ಗಟ್ಟಿಯಾಗಿರಲಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಇಂದು (ಅಕ್ಟೋಬರ್‌ 9) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿರೋಧ ಪಕ್ಷದವರಿಗೆ ಸರ್ಕಾರ ರಚನೆಯಾದ ಇಲ್ಲಿಯವರೆಗೂ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂದು ಹೇಳುವುದು ಹೊಸ ವಿಷಯವೇನಲ್ಲಾ. ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ 18 ತಿಂಗಳು ಕಳೆದಿವೆ. ವಿಪಕ್ಷದವರು ಹೇಳಿದಾಕ್ಷಣ ಸರ್ಕಾರ ಬೀಳಲ್ಲ ಎಂದು ತೀರುಗೇಟು ನೀಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಕೋಳಿವಾಡ ಅವರ ಹೇಳೀಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಮುಡಾ ಹಗರಣಕ್ಕೂ ಹರಿಯಾಣ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಮುಡಾ ಪ್ರಕರಣ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಈಗಾಗಲೇ ತನಿಖಾ ತಂಡ ತನಿಖೆ ನಡೆಸುತ್ತಿದೆ ಎಂದು ಹೇಳಿದರು.

Tags: