Mysore
20
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಲೋಕೇಶ್‌ ಪಿಯಾ ನಿವಾಸಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ

ಮೈಸೂರು: ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್‌ ಪಿಯಾ ನಿವಾಸಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ ನೀಡಿ ಬೆಳಗಿನ ಉಪಹಾರ ಸೇವಿಸಿದರು.

ನಗರದ ಸುಣ್ಣದಕೇರಿ ಬಡಾವಣೆಯಲ್ಲಿರುವ ಆಪ್ತ ಲೋಕೇಶ್‌ ಪಿಯಾ ನಿವಾಸಕ್ಕೆ ಇಂದು ಬೆಳಿಗ್ಗೆಯೇ ಭೇಟಿ ನೀಡಿದ್ದ ಸತೀಶ್‌ ಜಾರಕಿಹೊಳಿ ಅವರಿಗೆ ನಿವಾಸಿಗಳು ಅದ್ಧೂರಿ ಸ್ವಾಗತ ಕೋರಿದರು.

ಪಟಾಕಿ ಸಿಡಿಸಿ, ಹಾರ ತುರಾಯಿ ಹಾಕಿ ಲೋಕೇಶ್‌ ಪಿಯಾ ಬೆಂಬಲಿಗರು ಸ್ವಾಗತಿಸಿದರು.

ನಂತರ ಮನೆಗೆ ಆಗಮಿಸಿದ ಸಚಿವರು, ದೋಸೆ, ಅಕ್ಕಿರೊಟ್ಟಿ, ಚಟ್ನಿಪುಡಿ ಸೇರಿದಂತೆ ಉತ್ತರ ಕರ್ನಾಟಕದ ಶೈಲಿಯ ಉಪಹಾರ ಸೇವಿಸಿ ಖುಷಿಪಟ್ಟರು.

ಈ ವೇಳೆ ಅಲ್ಲಿ ನೆರೆದಿದ್ದ ಬೆಂಬಲಿಗರು ಹಾಗೂ ಸಾರ್ವಜನಿಕರು ಸತೀಶ್‌ ಜಾರಕಿಹೊಳಿ ಅವರನ್ನು ನೋಡಲು ಮುಗಿಬಿದ್ದರು.

Tags:
error: Content is protected !!