Mysore
16
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಬಿಟ್‌ ಕಾಯಿನ್‌ ಪ್ರಕರಣ: ಡಿವೈಎಸ್‌ಪಿ ಶ್ರೀಧರ್‌ ಪೂಜಾರ್‌ ಬಂಧಿಸಿದ ಎಸ್‌ಐಟಿ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಚಲನ ಮೂಡಿಸಿದ್ದ, ಬಹುಕೋಟಿ ಬಿಟ್‌ ಕಾಯಿನ್‌ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಸಂದರ್ಭದಲ್ಲಿ ಎವಿಡೆನ್ಸ್‌ ಟ್ಯಾಂಪರಿಂಗ್‌ ಮಾಡಿದ್ದ ಆರೋಪ ಹಿನ್ನೆಯಲ್ಲಿ ಡಿವೈಎಸ್‌ಪಿ ಶ್ರೀಧರ್‌ ಪೂಜಾರ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಎಸ್‌ಐಟಿ ಅಧಿಕಾರಿಗಳು ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಧರ್‌ ಪೂಜಾರ್‌ ಅವರನ್ನು ಇಂದು ವಿಚಾರಣೆಗಾಗಿ ಕರೆಸಿ ತನಿಖಾ ವಿಚಾರಣೆ ಮುಗಿದ ನಂತರ ಸಿಐಡಿ ಕಚೇರಿಯಲ್ಲೇ ಬಂಧನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಟ್‌ ಕಾಯಿನ್‌ ಹಗರಣ ಸಂಬಂಧಿಸಿದಂತೆ ಎಸ್‌ಐಟಿ ರಚನೆಯಾದ ನಂತರ ಕಾಟನ್‌ಪೇಟೆ ಠಾಣೆಯಲ್ಲಿ ಬಿಟ್‌ ಕಾಯಿನ್‌ ಕೇಸ್‌ನಲ್ಲಿ ಆರೋಪಗಳಿಗೆ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಶ್ರೀಧರ್‌ ವಿರುದ್ಧ ನೂತನ ಎಫ್‌ಐಆರ್‌ ದಾಖಲಾಗಿತ್ತು. ಅಲ್ಲದೇ ಇದೇ ಎಸ್‌ಐಟಿ ತಂಡವೂ ಕಾಟನ್‌ಪೇಟೆ ಠಾಣೆಯ ಕೇಸ್‌ಅನ್ನು ಕೂಡ
ತನಿಖೆ ನಡೆಸುತ್ತಿದೆ. ಹೀಗಾಗಿ ಶ್ರೀಧರ್‌ ಅವರನ್ನು ಬಂಧಿಸಿ ಇಂದೇ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ಶ್ರೀಧರ್‌ ಪೂಜಾರ್‌ ವಿರುದ್ಧ ವಿಚಾರಣಾ ನ್ಯಾಯಾಲಯ ವಿಚಾರಣೆಗೆ ಸಹಕರಿಸದೇ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಘೋಷಿತ ಆರೋಪಿ ಎಂದು ವಾರೆಂಟ್‌ ಜಾರಿ ಮಾಡಿತ್ತು. ಈ ವಾರೆಂಟ್‌ಅನ್ನು ಪ್ರಶ್ನಿಸಿ ಶ್ರೀಧರ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಅರ್ಜಿ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್‌ ಘೋಷಿತ ಆರೋಪಿ ಎಂಬ ಆದೇಶವನ್ನು ರದ್ದುಪಡಿಸುವಂತೆ ಸೂಚನೆ ನೀಡಲಾಗಿತ್ತು.

Tags:
error: Content is protected !!