Mysore
35
scattered clouds

Social Media

ಗುರುವಾರ, 30 ಏಪ್ರಿಲ 2026
Light
Dark

ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಅವಮಾನಕರ ಪದ ಬಳಸಿ ಜೆಡಿಎಸ್‌ ಟ್ವೀಟ್‌

ಬೆಂಗಳೂರು: ಸರ್ಕಾರದ ಬ್ರಾಂಡ್‌ ಬೆಂಗಳೂರು, ಸೋಲಾರ್‌ ಪಾರ್ಕ್‌ ಯೋಜನೆಗಳಿಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ದ ಜೆಡಿಎಸ್‌ ಟ್ವೀಟ್‌ ಮಾಡಿ ಕಿಡಿಕಾರಿದೆ.

ಈ ಯೋಜನೆಗಳಿಗೆ ಸಂಬಂಧಿಸಿದಂತೆ ತೆರೆ ಹಿಂದೆ ಈ ರೀತಿಯ ಆಟವಾಡುತ್ತಿರುವ ಜೈಲು ಹಕ್ಕಿಗೆ ಸಿಎಂ ಕುರ್ಚಿ ಕೈಗೆಟುಕದ ಹುಳಿ ದ್ರಾಕ್ಷಿ ಎಂದು ಅವಮಾನಕರ ಪದ ಬಳಕೆ ಮಾಡಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ‌ಎಕ್ಸ್‌ ಖಾತೆಯ ಮೂಲಕ ಪೋಸ್ಟ್‌ ಮಾಡಿರುವ ಜೆಡಿಎಸ್‌, ಹೈಕಮಾಂಡ್‌ ಗುಲಾಮನಾಗಿ ಕಪ್ಪ ಕಳುಹಿಸುವ ಕಲೆಕ್ಷನ್‌ ಏಜೆಂಟ್‌, ಬಂಡೆ ಕಳ್ಳನ ರಾಜಕೀಯ ಭ್ರಷ್ಟಾಚಾರದ ಇತಿಹಾಸವನ್ನು ಸಂಪುಟಗಳಲ್ಲಿ ಪ್ರಕಟಿಸಬಹುದು ಎಂದು ವ್ಯಂಗ್ಯವಾಗಿಡೆ. ಡಿ.ಕೆ.ಶಿವಕುಮಾರ್‌ ಇರುವ ಪೋಸ್ಟರ್‌ ಅನ್ನು ಹಂಚಿಕೊಂಡು ಅವಮಾನಕರವಾದ ಪದ ಬಳಸಿ ವ್ಯಂಗ್ಯ ಮಾಡಿದ್ದು, ಕಾಂಗ್ರೆಸ್‌ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

 

 

Tags:
error: Content is protected !!