ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಸಂಭ್ರಮ ಕಳೆಗಟ್ಟಿದೆ. ಈ ನಿಟ್ಟಿನಲ್ಲಿ ದಸರಾ ದೀಪಾಲಂಕಾರಕ್ಕೆ ಡ್ರೋನ್ ಶೋ ಪ್ರದರ್ಶನವು ಮೆರಗು ನೀಡಿ, ದಸರಾವನ್ನು ಮತ್ತಷ್ಟು ಸುಂದರಗೊಳಿಸಲಿದೆ.
ಅಕ್ಟೋಬರ್ 6, 7, 11 ಮತ್ತು 12 ರಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ದಸರಾ ಡ್ರೋನ್ ಶೋ ನಡೆಯಲಿದೆ.
ಎರಡು ದಿನ ಉಚಿತ ಶೋ
ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ವೀಕ್ಷಿಸಲು ಅನೇಕ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ. ಈ ಮಧ್ಯೆಯೇ ಪ್ರವಾಸಿಗರನ್ನು ಆಕರ್ಷಿಸಲು 6 ಮತ್ತು 7 ರಂದು ರಾತ್ರಿ 8 ರಿಂದ 8.15 ರವರೆಗೆ ಉಚಿತ ಡ್ರೋನ್ ಶೋ ನಡೆಸಲು ತೀರ್ಮಾನಿಸಲಾಗಿದೆ.
ದಸರಾ ಮಹೋತ್ಸವ ಪ್ರಯುಕ್ತ ಯುವ ಸಂಭ್ರಮ, ಯುವ ದಸರಾ, ವಸ್ತು ಪ್ರದರ್ಶನ ಮತ್ತು ಆಹಾರ ಮೇಳದಂತೆ ಡ್ರೋನ್ ಶೋ ಸಹ ಜನತೆಯನ್ನು ಸೆಳೆಯುವ ಕಾರ್ಯಕ್ರಮವಾಗಿದೆ.