Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕೌದಳ್ಳಿ: ಬಸ್‌ ನಿಲ್ದಾಣದಲ್ಲಿ ಉರಿಯದ ಬೀದಿ ದೀಪ; ದುರಸ್ತಿಗೆ ಗ್ರಾಮಸ್ಥರ ಆಗ್ರಹ

ಹನೂರು : ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣದ ಸರ್ಕಲ್ ನಲ್ಲಿ ಅಳವಡಿಸಿರುವ ಹೈ ಮಾಸ್ಕ್ ದೀಪ ದುರಸ್ತಿಯಾಗಿ ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಸರ್ಕಲ್ ನಲ್ಲಿ ಅಳವಡಿಸಿರುವ ಹೈ ಮಾಸ್ಕ್ ದೀಪಕೆಟ್ಟು ಹಲವು ದಿನಗಳ ಕಳೆದಿದೆ. ಆದರೆ ದುರಸ್ತಿ ಮಾಡುವ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ತೀವ್ರ ತೊಂದರೆಯಾಗಿದೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಹನೂರು, ಎಲ್ಲೇಮಾಳ ಮಾರ್ಗವಾಗಿ ಹಾಗೂ ಅಜ್ಜೀಪುರ ರಾಮಪುರ ಮಾರ್ಗವಾಗಿ ತೆರಳಿ ಕೌದಳ್ಳಿ ಗ್ರಾಮದ ಸರ್ಕಲ್ ನಲ್ಲಿ ಸೇರಿ ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನಗಳು ಸರಕು ಸಾಗಣೆ ವಾಹನ ಬಸ್, ಸೇರಿದಂತೆ ಇನ್ನಿತರ ವಾಹನಗಳ ಮೂಲಕ ತೆರಳುತ್ತಾರೆ.

ಆದರೆ ಕೌದಳ್ಳಿ ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನದಲ್ಲಿಯೇ ಹೈ ಮಾಸ್ ದೀಪವನ್ನು ದುರಸ್ತಿ ಮಾಡದಿದ್ದ ಮೇಲೆ ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಗ್ರಾಮದ ವಿದ್ಯುತ್ ದೀಪಗಳು ಕೆಟ್ಟು ನಿಂತರೆ ಯಾವ ರೀತಿ ಕ್ರಮವಹಿಸುತ್ತಾರೆ ಎಂಬುದಕ್ಕೆ ಇದೆ ಉದಾಹರಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಮಹಾನವಮಿ ಆಯುಧ ಪೂಜೆ ವಿಜಯದಶಮಿ ದೀಪಾವಳಿ ಕಾರ್ತಿಕ ಮಾಸ ಜಾತ್ರಾ ಮಹೋತ್ಸವಗಳು ಆಗಮಿಸುವ ಹಿನ್ನೆಲೆ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಾರೆ ಇನ್ನು ಮುಂದಾದರು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರ್ಕಲ್ ನಲ್ಲಿರುವ ಹೈ ಮಾಸ್ಕ್ ದೀಪವನ್ನು ದುರಸ್ತಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿದೆ.

Tags: