Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ನಾಳೆಯಿಂದ ಮೈಸೂರು ಯುವ ದಸರಾ ಆರಂಭ

ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಾಳೆಯಿಂದ ಯುವ ದಸರಾ ಸಂಭ್ರಮ ನಡೆಯಲಿದೆ.

ಈ ಬಾರಿ ಯುವ ದಸರಾ ಮಹಾರಾಜ ಕಾಲೇಜು ಮೈದಾನದಿಂದ ನಗರದ ಹೊರವಲಯದ ಉತ್ತನಹಳ್ಳಿ ಬಳಿಯ 100 ಎಕರೆ ಕೃಷಿ ಭೂಮಿಯಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸುತ್ತಾರೆ. ಹೀಗಾಗಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಯೋಜಕರಿಗೆ ಸೂಚನೆ ನೀಡಲಾಗಿದೆ.

ಈ ಬಾರಿ ಯುವ ದಸರಾಗೆ ಶ್ರೇಯಾ ಘೋಷಾಲ್‌, ಎ.ಆರ್.ರೆಹಮಾನ್‌ ಮತ್ತು ಇಳಯರಾಜ ಆಗಮಿಸುತ್ತಿರುವುದು ವಿಶೇಷವಾಗಿದೆ.

ಇನ್ನು ಯುವ ದಸರಾಗೆ ಹೋಗಲು ನಗರದ ಪ್ರಮುಖ ಸ್ಥಳಗಳಿದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳು ಲಭ್ಯವಿದೆ. ಸಾರ್ವಜನಿಕ ಬಸ್‌ಗಳು ನಿಯಮಿತವಾಗಿ ಈ ಪ್ರದೇಶಕ್ಕೆ ಓಡಾಡುತ್ತವೆ. ಇನ್ನು ಖಾಸಗಿ ವಾಹನಗಳಿಗೆ ಕಾರ್ಯಕ್ರಮ ನಡೆಯುವ ಹತ್ತಿರ ಪಾರ್ಕಿಂಗ್‌ ವ್ಯವಸ್ಥೆಯಿದೆ.

 

Tags: