Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಿಶ್ವದ 2ನೇ ದೊಡ್ಡ ಶ್ರೀಮಂತ ವ್ಯಕ್ತಿಯಾದ ಮೆಟಾದ ಸಂಸ್ಥಾಪಕ

ಕ್ಯಾಲಿಫೋರ್ನಿಯ: ಮೆಟಾ ಪ್ಲಾಟ್‌ ಫಾರ್ಮ್ಸ್‌ ಇಂಕ್‌ ಷೇರು ಮೌಲ್ಯ ಏರಿಕೆ ಹಿನ್ನೆಲೆಯಲ್ಲಿ ಅಮೆಜಾನ್‌ ಒಡೆಯ ಜೆಫ್‌ ಬೆಝೋಸ್‌ರನ್ನು ಹಿಂದಿಕ್ಕಿ ಮೆಟಾದ ಸಂಸ್ಥಾಪಕ ಮಾರ್ಕ್‌ ಝುಕರ್‌ ಬರ್ಗ್‌ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಬ್ಲೂಮ್‌ ಬರ್ಗ್‌ ಬಿಲಿಯನೇರ್ಸ್‌ ಸೂಚ್ಯಂಕ ವರದಿ ನೀಡಿದೆ.

ಇತ್ತೀಚಿನ ತಿಂಗಳುಗಳಲ್ಲಿ ಮೆಟಾವರ್ಸ್‌ನ ಷೇರು ಮೌಲ್ಯವು ಏರಿಕೆ ಕಂಡಿದ್ದು, ಒಟ್ಟಾರೆ ಮೌಲ್ಯ 206.2 ಬಿಲಿಯನ್‌ ಡಾಲರ್‌ನಷ್ಟು ಗಡಿದಾಟಿದೆ. ಹೀಗಾಗಿ ಬರ್ಗ್‌ ಆಸ್ತಿ ಮೌಲ್ಯವು ಅಮೆಜಾನ್‌ ಇಂಕ್‌ ಒಡೆಯ ಬೆಝೋಸ್‌ಗಿಂತ 1.1 ಬಿಲಿಯನ್‌ನಷ್ಟು ಅಧಿಕವಾಗಿದ್ದು, ಟೆಸ್ಲಾ ಇಂಕ್‌ ಕಂಪನಿ ಅಧ್ಯಕ್ಷ ಎಲಾನ್‌ ಮಸ್ಕ್‌ಗಿಂತ 50 ಬಿಲಿಯನ್‌ಗಳಷ್ಟು ಮೌಲ್ಯ ಹಿಂದಿದೆ ಎಂದು ತಿಳಿದು ಬಂದಿದೆ.

2ನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಅಧಿಕ ಏರಿಕೆ ಕಂಡಿರುವ ಮೆಟಾದ ಷೇರು ಮೌಲ್ಯವು ಶೇ.23ರಷ್ಟು ಹೆಚ್ಚಾಗಿದೆ. ಆದರೆ ನಿನ್ನೆ ಮೆಟಾದ ಷೇರು ಮೌಲ್ಯ ಸಾರ್ವಕಾಲಿಕ ದಾಖಲೆಯಾಗಿ 582.77 ತಲುಪಿದೆ. ಒಟ್ಟಾರೆ ಮೆಟಾದ ಸಂಸ್ಥಾಪಕ ಮತ್ತು ಕಾರ್ಯಕಾರಿ ಅಧಿಕಾರಿ ಮಾರ್ಕ್‌ ಝುಕರ್‌ ಬರ್ಗ್‌, ಈ ವರ್ಷದ ಶ್ರೀಮಂತ ಸೂಚ್ಯಂಕದಲ್ಲಿ ನಾಲ್ಕು ಸ್ಥಾನವನ್ನು ಪಡೆದುಕೊಂಡಿದ್ದಾರೆ.

 

Tags: