Mysore
28
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಇಡೀ ನಾಡು ಆಚರಿಸುವ ಸಂಭ್ರಮದ ಹಬ್ಬವೇ ದಸರಾ: ಹಂ.ಪ.ನಾಗರಾಜಯ್ಯ

ಮೈಸೂರು: ದಸರಾ ಹಬ್ಬ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿರದೇ ಇಡೀ ನಾಡೇ ಹಬ್ಬವನ್ನು ಆಚರಣೆ ಮಾಡುತ್ತದೆ ಎಂದು ದಸರಾ ಉದ್ಘಾಟಕರಾದ ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರು ಹೇಳಿದ್ದಾರೆ.

ಈ ಬಗ್ಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೆರವೇರಿಸಿ ಭಾಷಣ ಮಾಡಿದ ಹಂ.ಪ.ನಾಗರಾಜಯ್ಯ ಅವರು, ಅನೇಕ ಹಬ್ಬಗಳು ಒಂದೆರಡು ದಿನಗಳಿಗೆ ಸೀಮಿತವಾಗಿವೆ. ಆದರೆ ದಸರಾ ಹಲವು ದಿನಗಳ ಕಾಲ ನಡೆಯಲಿದೆ. ಇದು ನಾಡಿನ ಉದ್ದಗಲಕ್ಕೂ ಅನೇಕ ಪ್ರಭಾವ ಬೀರಿದೆ ಎಂದರು.

ಇನ್ನು ಬಾಲ್ಯದಲ್ಲಿ ನೋಡಿದ ದಸರಾ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ತಾಯಿಯ ಜೊತೆ ಬೊಂಬೆ ಖರೀದಿ ಮಾಡಿದ್ದ ಬಗ್ಗೆ ಮಾಹಿತಿ ನೀಡಿದರು.

ಇದು ಅರಮನೆಯ ಹಬ್ಬವಲ್ಲ, ಜನರ ಹಬ್ಬ. ಇದನ್ನು ಸರ್ಕಾರ ಸಂಭ್ರಮದಿಂದ ಆಚರಿಸುತ್ತಿದೆ. ಈ ಆಚರಣೆಯಿಂದ ಕರ್ನಾಟಕದ ಸಾಂಸ್ಕೃತಿಕ ಪಾರಂಪರ್ಯ ಮುಂದಿನ ಪೀಳಿಗೆಗೂ ಪರಿಚಯವಾಗುತ್ತದೆ ಎಂದು ಹೇಳಿದರು.

ಇನ್ನು ಇಸ್ರೇಲ್-ಪ್ಯಾಲೆಸ್ತೇನ್‌, ರಷ್ಯಾ-ಉಕ್ರೇನ್‌ ಯುದ್ಧ ನಿಂತು ಶಾಂತಿ ನೆಲೆಸಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಯಲು ಚಾಮುಂಡೇಶ್ವರಿ ದೇವಿ ತಂದೆ-ತಾಯಿಯರಿಗೆ ಸದ್ಬುದ್ಧಿ ಅನುಗ್ರಹಿಸಲಿ ಎಂದು ಬೇಡಿದರು.

 

Tags:
error: Content is protected !!