Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕೊಡಗು: 7 ಅಂತರಾಷ್ಟ್ರೀಯ ಡ್ರಗ್ ಫೆಡ್ಲರ್ ಗಳ ಬಂಧನ

ಕೊಡಗು ಪೋಲಿಸರ ಯಶಸ್ವಿ ಕಾರ್ಯಾಚರಣೆ
ನಾಪೋಕ್ಲು, ವಿರಾಜಪೇಟೆ ನಿವಾಸಿಗಳೇ ಡ್ರಗ್ ಪೆಡ್ಲರಗಳು

ಮಡಿಕೇರಿ: ಥೈಲ್ಯಾಂಡ್ ದೇಶದಿಂದ ದುಬೈ ಮತ್ತು ಕೇರಳಕ್ಕೆ ತನ್ನ ಸಹಚಾರರೊಂದಿಗೆ ಹೈಡ್ರೋ ಗಾಂಜಾವನ್ನು ಸಾಗಿಸುತ್ತಿದ್ದ ಡ್ರಗ್ ಪೆಡ್ಲರ್‌ ಹಾಗೂ ಇತರ ಸಹಚರರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಕೆ. ರಾಮರಾಜನ್ ನೀಡಿದ್ದಾರೆ. ಈ ಕುರಿತು ಸುದ್ದಿ ಇಲ್ಲಿದೆ.

ಬಂದಿತ ಆರೋಪಿಗಳ ವಿವರ
ನಾಪೋಕ್ಲುವಿನ ಅಕಿನಾಸ್ ಎಂ ಎನ್, ರಿಯಾಜ್ ಪಿ. ಎಂ, ವಿರಾಜಪೇಟೆಯ ವಾಜಿದ್ ಸಿ.ಇ, ನಾಪೋಕ್ಲುವಿನ ಯಾಹ್ಯ ಸಿ.ಎಚ್, ವಿರಾಜಪೇಟೆಯ ನಾಸೂರುದ್ದೀನ್ ಎಂ. ಯು, ರಾಹುಫ್ ಎಂ. ಎ, ಪ್ರಕರಣದ ಕೇಂದ್ರ ಬಿಂದು ಕಾಸರಗೋಡು ಜಿಲ್ಲೆಯ ಮೆಹರೂಫ್ ಕೆ. ಎ.

ಪ್ರಕರಣದ ವಿವರ
ಥೈಯ್ಲ್ಯಾಂಡ್ ದೇಶದ ಬ್ಯಾಂಕಾಕ್ ನಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮೆಹರೂಫ್ ಎಂಬಾತ ಕೆಫೆ ಒಂದನ್ನು ಇಟ್ಟುಕೊಂಡಿದ್ದು, ಆತನಿಂದ ವಿರಾಜಪೇಟೆಯ ರಾಹುಫ್ ಸೆ.9 ರಂದು ವಿಮಾನದ ಮೂಲಕ ಥೈಲ್ಯಾಂಡ್ ನಿಂದ ಬೆಂಗಳೂರಿಗೆ ಹೈಡ್ರೋ ಗಾಂಚವನ್ನು ತಂದಿದ್ದನು. ಬಳಿಕ ಇತರ ಸಹಚಾರರೊಂದಿಗೆ ಮೈಸೂರು ಹಾಗೂ ಗೋಣಿಕೊಪ್ಪಕ್ಕೆ ಬೆಳಗಿನ ಜಾವ ಆಗಮಿಸಿ, ಗೋಣಿಕೊಪ್ಪಲಿನ ಬೆಳ್ಳಿಯಪ್ಪ ರೆಸಿಡೆನ್ಸಿ ಯಲ್ಲಿ ಕೆಲವರು ತಂಗಿ ನಂತರ ಇತರ ಸಹಚರು ಮಡಿಕೇರಿಯತ್ತ ಗಾಂಜಾ ಸಹಿತ ತೆರಳುತ್ತಿದ್ದರು.

ಈ ವೇಳೆ ಖಚಿತ ಮಾಹಿತಿ ಅರಿದ ಡಿ.ಸಿ.ಆರ್.ಬಿ ಪೊಲೀಸ್ ತಂಡ ಜಿಲ್ಲಾ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಂತೆ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

ಪ್ರಕರಣದ ಮುಖ್ಯ ರೂವಾರಿ ಮೆಹರೂಫ್ ಕೊಚ್ಚಿನ್ ಮೂಲಕ ಬ್ಯಾಂಕಾಕಿಗೆ ವಿಮಾನದ ಮೂಲಕ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪೊಲೀಸ್ ಕಮಿಷನರ್ ಅವರ ಸಹಕಾರದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ ಅವರ ತಂಡ ಸೆಪ್ಟೆಂಬರ್ 29ರಂದು ರಾತ್ರಿ 10:30 ಗಂಟೆಗೆ ಬಂಧಿಸಿ ಕೊಡಗಿಗೆ ಕರೆ ತಂದಿದ್ದಾರೆ.

ಅಂತರಾಷ್ಟ್ರೀಯ ಮಟ್ಟದ ಈ ದಂಧೆಯಲ್ಲಿ ಕೊಡಗು ಜಿಲ್ಲೆಯ ನಾಪೋಕ್ಲು ಹಾಗೂ ವಿರಾಜಪೇಟೆ ತಾಲೂಕಿನ ಆರು ಮಂದಿ ಬಾಗಿಗಳಾಗಿದ್ದು ಕೊಡಗು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಹಲವರು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದಾರೆ ಎಂಬ ಸಂದೇಹಗಳು ಮೂಡಿವೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಇದೀಗ ಈ ಪ್ರಕರಣ ಆತಂಕ ಮೂಡಲು ಕಾರಣವಾಗಿದೆ.

Tags: