Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸಿಎಂ ಪತ್ನಿ ಮುಡಾ ಸೈಟ್‌ ವಾಪಸ್‌ ನೀಡಲು ಇಲ್ಲಿದೆ ಮುಖ್ಯ ಕಾರಣ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಸ್ವಇಚ್ಛೆಯಿಂದ ತಮ್ಮ 14 ಬದಲಿ ನಿವೇಶನಗಳನ್ನು ವಶ ಪಡಿಸಿಕೊಳ್ಳುವಂತೆ ಪತ್ರ ಬರೆದು ಮುಡಾಕ್ಕೆ ವಾಪಸ್‌ ನೀಡಲು ಪಿಎಂಎಲ್‌ಎ ಕಾಯ್ದೆ 15 ಸೆಕ್ಷನ್‌ ಮಹತ್ವದ್ದಾಗಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ನನಗೆ ಯಾವುದೇ ಭಯವಿಲ್ಲ. ತಾನು ಹೋರಾಟಕ್ಕೆ ಸದಾ ಸಿದ್ದ ಅದನ್ನೇ ಮಾಡುತ್ತೇನೆ ಹೊರತು ರಾಜೀನಾಮೆ ಮಾತ್ರ ನೀಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಇದೀಗ ಸಿಎಂ ಅವರ ಪತ್ನಿ ನಿವೇಶನಗಳನ್ನು ವಾಪಸ್‌ ಮುಡಾಗೆ ಹಿಂತಿರುಗಿಸಿರುವುದು ಪ್ರಕರಣಕ್ಕೆ ದೊಡ್ಡ ತಿರುವನ್ನು ನೀಡಿದೆ. ಸಿಎಂ ಪತ್ನಿಯ ಈ ನಿರ್ಧಾರಕ್ಕೆ ವಿರೋಧ ಪಕ್ಷದ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ದ್ವೇಷ ರಾಜಕಾರಣದಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್‌ ನಾಯಕ ಆರೋಪಿಸುತ್ತಿದ್ದಾರೆ.

ಮುಡಾ ಹಗರಣ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಪತ್ನಿ ನಿವೇಶನಗಳನ್ನು ಹಿಂತಿರುಗಿಸಲು ಮುಖ್ಯವಾಗಿ ಮನಸ್ಸು ಮಾಡಲು ಜಾರಿ ನಿರ್ದೇಶಾಲಯದ 2003ರ ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್‌ 15ರ ಅಡಿಯಲ್ಲಿ ದಾಖಲಿಸಿರುವ ಪ್ರಕರಣವೇ ಕಾರಣ ಎನ್ನಲಾಗಿದೆ.

ಈ ಸೆಕ್ಷನ್‌ ಅಡಿಯಲ್ಲಿ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರವಿದ್ದು, ಯಾವುದೇ ನ್ಯಾಯಾಲಯದ ಆದೇಶ ಪಡೆಯಬೇಕು ಎಂಬ ನಿಯಮವಿಲ್ಲ. ಜೊತೆಗೆ ಇದರಲ್ಲಿ ಸಂಬಂಧಪಟ್ಟ ಆಸ್ತಿಗಾಗಿ ಹಣಕಾಸು ಅಕ್ರಮ ವರ್ಗಾವಣೆ ನಡೆದಿದೆ ಎಂದು ತನಿಖಾಧಿಕಾರಿಗಳಿಗೆ ಅನಿಸಿದರೆ ಮಾತ್ರ ಆ ಅಧಿಕಾರಿಗಳು 180 ದಿನಗಳವರೆಗೂ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.

Tags: