Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ಅಂತಿಮ ಹಂತದ ಸಿಡಿಮದ್ದು ಸಿಡಿಸುವ ತಾಲೀಮು

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿದ್ದು, ಇಂದು ಗಜಪಡೆ ಹಾಗೂ ಅಶ್ವದಳಕ್ಕೆ ಅಂತಿಮ ಹಂತದ ಸಿಡಿಮದ್ದು ತಾಲೀಮನ್ನು ನಡೆಸಲಾಯಿತು.

ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಅರಣ್ಯ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ತಾಲೀಮು ನಡೆಸಿದರು.

ಈ ಸಿಡಿಮದ್ದು ತಾಲೀಮಿನಲ್ಲಿ ಕ್ಯಾಪ್ಟನ್‌ ಅಭಿಮನ್ಯು ಅಂಡ್‌ ಟೀಂ ಹಾಗೂ ಅಶ್ವಗಳು ಭಾಗಿಯಾಗಿದ್ದರವು. ಫಿರಂಗಿಗಳಿಂದ ಮೂರು ಸುತ್ತು ಕುಶಾಲತೋಪು ಸಿಡಿಸಲಾಯಿತು.

ಈ ಶಬ್ದಕ್ಕೆ ಗಜಪಡೆ ಹಾಗೂ ಅಶ್ವದಳ ಹೆದರದೇ ಧೈರ್ಯವಾಗಿ ಇದ್ದವು. ಆದರೆ ಕೆಲ ಅಶ್ವಗಳು ಕೊಂಚ ಬೆದರಿದವು.

ಕುಶಾಲತೋಪು ತಾಲೀಮಿನಲ್ಲಿ ಹಲವು ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

Tags: