ಬೆಂಗಳೂರು: 14 ಸೈಟ್ ವಾಪಸ್ ನೀಡುವ ಬಗ್ಗೆ ನನ್ನ ಹೆಂಡತಿ ನನ್ನ ಜೊತೆ ಚರ್ಚೆಯೇ ಮಾಡಿಲ್ಲ. ಪತಿಗೆ ಕಳಂಕ ಬರಬಾರದು ಎಂದು ಮನನೊಂದು ಸೈಟ್ ವಾಪಸ್ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರು ಮುಡಾ ಹಗರಣದ ಸಂಬಂಧ 14 ಸೈಟ್ ವಾಪಸ್ ನೀಡುವುದಾಗಿ ತನ್ನ ಪತ್ನಿ ಪಾರ್ವತಿ ಅವರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸೈಟ್ ವಾಪಸ್ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿಲ್ಲ. ನನ್ನ ಹೆಂಡತಿ ಸ್ವತಂತ್ರ ನಿರ್ಧಾರ ತೆಗೆದುಕೊಂಡಿದ್ದಾರೆ. ನನ್ನ ಪತಿಗೆ ತೇಜೋವಧೆ ರಾಜಕೀಯ ದ್ವೇಷ ಮಾಡುತ್ತಿದ್ದಾರೆ. ಹೀಗಾಗಿ ಸೈಟ್ ಬೇಡ ಎಂದು ವಾಪಸ್ ಕೊಟ್ಟಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದು ಸೈಟ್ ವಾಪಸ್ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ತಮ್ಮ ರಾಜೀನಾಮೆಗೆ ಬಿಜೆಪಿ ನಾಯಕರ ಆಗ್ರಹ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಮುಡಾ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ನಾನು ತಪ್ಪೇ ಮಾಡಿಲ್ಲ. ಯಾಕೆ ನಾನು ರಾಜೀನಾಮೆ ಕೊಡಬೇಕು. ತಪ್ಪು ಮಾಡಿದ್ದರೇ ಮಾತ್ರ ರಾಜೀನಾಮೆ ಕೊಡಬೇಕು. ನಾನು ತಪ್ಪು ಮಾಡಿಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.