ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ನಡೆಯುತ್ತಿರುವ ಬೆನ್ನಲ್ಲೇ ನಗರದ ಹೊರವಲಯದ ಕೆಆರ್‌ಎಸ್ ಬ್ಯಾಕ್ ವಾಟರ್‌ನಲ್ಲಿ ನೂರಕ್ಕೂ ಹೆಚ್ಚು ಯುವಕ-ಯುವತಿಯರು ರೇವ್ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ದಾಳಿ ಮಾಡಿದ್ದ ಪಿಎಸ್‌ಐ ಮಂಜುನಾಥ್ ನಾಯಕ ಅವರನ್ನು ಇದೀಗ ಅಮಾನತ್ತುಗೊಳಿಸಲಾಗಿದೆ.
ಇಲವಾಲ ಠಾಣೆ ವ್ಯಾಪ್ತಿಯೊಳಗೆ ಒಳಪಡುವ ಮೈಸೂರು ತಾಲ್ಲೂಕಿನ ಮೀನಾಕ್ಷಿಪುರದ ಸಮೀಪದಲ್ಲಿ ಸೆ.28 ರಂದು ಅನುಮತಿ ಪಡೆಯದೆ ಪಾರ್ಟಿ ನಡೆಸುತ್ತಿದ್ದ ತಂಡದ ಮೇಲೆ ದಾಳಿ ಮಾಡಿದ್ದ ಪಿಎಸ್‌ಐ ಮಂಜುನಾಥ ನಾಯಕ್ ಅವರನ್ನು ಕರ್ತವ್ಯಲೋಪ ಆರೋಪದಲ್ಲಿ ಅಮಾನತ್ತು ಮಾಡಿ ಎನ್.ವಿಷ್ಣುವರ್ಧನ್ ಅವರು ಆದೇಶ ಹೊರಡಿಸಿದ್ದಾರೆ.