ಬೆಂಗಳೂರು: ಮೈಸೂರು ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಅತಿ ದೊಡ್ಡ ಸಂಕಷ್ಟ ಎದುರಾಗಲಿದೆ.
ಲೋಕಾಯುಕ್ತ ಬಳಿಕ ಈಗ ಸಿಎಂ ಸಿದ್ದು ವಿರುದ್ಧ ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.
ಮೈಸೂರು ಲೋಕಾಯುಕ್ತ ದಾಖಲಿಸಿರುವ ಎಫ್‌ಐಆರ್ ಅಧ್ಯಯನ ನಡೆಸಿದ ಇ.ಡಿ ಎಫ್‌ಐಆರ್ ದಾಖಲು ಮಾಡುವ ಸಾಧ್ಯತೆಯಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ತಯಾರಿ ಮಾಡಿಕೊಂಡಿದೆ ಎನ್ನಲಾಗಿದೆ.
ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಮೇರೆಗೆ ಇ.ಡಿ ಎಫ್‌ಐಆರ್ ದಾಖಲು ಮಾಡಲು ಮುಂದಾಗಿದ್ದು, ಒಂದು ವೇಳೆ ಎಫ್‌ಐಆರ್ ದಾಖಲಾದರೆ, ಸಿಎಂಗೆ ಭಾರೀ ಸಂಕಷ್ಟ ಎದುರಾಗಲಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಸಿದ್ದರಾಮಯ್ಯ ಮುಂದಿನ ನಡೆಯೇನು ಎಂಬುದೇ ಎಲ್ಲರ ಕುತೂಹಲವಾಗಿದೆ.