Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅರಮನೆ ನಗರಿಯಲ್ಲಿ ಗರಿಗೆದರಿದ ಸಡಗರ

ದಸರಾ ಮಹೋತ್ಸವ ವಿಧ್ಯುಕ್ತ ಚಾಲನೆಗೆ ಐದು ದಿನಗಳಷ್ಟೇ ಬಾಕಿ

ಕೆ. ಬಿ. ರಮೇಶನಾಯಕ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಗಳ ನಗರಿ ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳಿಗೆ ಬಣ್ಣ ಬಳಿಯುವ ಕೆಲಸ, ರಸ್ತೆ ದುರಸ್ತಿ, ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ಹಲವು ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಮಹಾನಗರ ಪಾಲಿಕೆ ವತಿಯಿಂದ ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನು ಪೂರ್ಣ ಗೊಳಿಸಲಾಗಿದೆ. ಹಾರ್ಡಿಂಜ್ ಸರ್ಕಲ್, ಕೆ. ಆರ್. ಸರ್ಕಲ್, ಚಾಮರಾಜ ಸರ್ಕಲ್‌ಗಳ ವೃತ್ತಗಳ ಗೋಪುರಗಳಿಗೆ ಬಣ್ಣ ಬಳಿಯಲಾಗಿದ್ದು, ಪ್ರತಿಮೆಗಳನ್ನು ಸ್ವಚ್ಛಗೊಳಿಸಲಾಗಿದೆ. ದಸರಾ ಜಂಬೂ ಸವಾರಿ ಮೆರವಣಿಗೆ ಸಾಗುವ ದಾರಿಯಲ್ಲಿರುವ -ಟ್‌ಪಾತ್‌ಗಳಲ್ಲಿ ಇರುವ ಒಳಚರಂಡಿಗಳನ್ನು ದುರಸ್ತಿಗೊಳಿಸಲಾಗುತ್ತಿದೆ. ಟೌನ್‌ಹಾಲ್‌ಗೆ ಹೊಸದಾಗಿ ಬಣ್ಣ ಬಳಿಯಲಾಗುತ್ತಿದೆ. ಇದೇ ಮೊದಲ ಬಾರಿಗೆ ಡಿ. ದೇವರಾಜ ಅರಸ್ ರಸ್ತೆ, ಜೆಎಲ್‌ಬಿ ರಸ್ತೆ, ಕೆ. ಆರ್. ವೃತ್ತದಲ್ಲಿ ‘೩ಡಿ’ ಪೇಯಿಂಟ್ ಮಾಡಲಾಗಿದೆ.

ಅರಮನೆಗೆ ಸಿಂಗಾರ: ಅರಮನೆಯ ದರ್ಬಾರ್ ಹಾಲ್, ಆನೆ ಬಾಗಿಲಿನ ಬಳಿಯ ಚಾವಣಿ, ಗ್ಯಾಲರಿ ಸೇರಿದಂತೆ ಒಳಾವರಣದಲ್ಲಿ ಬಣ್ಣ ಬಳಿಯುವ ಕೆಲಸ ಬಹುತೇಕ ಮುಗಿದಿದೆ. ವಿದ್ಯುತ್ ದೀಪಗಳನ್ನು ದುರಸ್ತಿ ಮಾಡಲಾಗುತ್ತಿದ್ದು, ಇದಕ್ಕಾಗಿ ೧೫ ಸಿಬ್ಬಂದಿಯನ್ನು ಒಳಗೊಂಡ ಎಲೆಕ್ಟ್ರಿಷಿಯನ್‌ಗಳು ಕೆಲಸ ಮಾಡುತ್ತಿದ್ದಾರೆ. ಎರಡು-ಮೂರು ದಿನಗಳೊಳಗೆ ಅರಮನೆ ಒಳಾವರಣದಲ್ಲಿ ದಸರಾ ಸಿದ್ಧತಾ ಕಾರ್ಯ ಪೂರ್ಣಗೊಳಿಸಲು ಅರಮನೆ ಮಂಡಳಿ ಕ್ರಮಕೈಗೊಂಡಿದೆ.

ಅರಮನೆ ಆವರಣದಲ್ಲಿರುವ ಉದ್ಯಾನಗಳಲ್ಲಿ ಕಳೆ ಗಿಡಗಳ ತೆರವು ಕಾರ್ಯವನ್ನೂ ಆರಂಭಿಸಲಾಗಿದೆ. ಅರಮನೆ ಮುಂಭಾಗದ ಪಾರ್ಕ್‌ನಲ್ಲಿ ಹೂವಿನ ಕುಂಡಗಳನ್ನು ಜೋಡಣೆ ಮಾಡಲು ನೆಲ ಅಗೆದು ಹದ ಮಾಡಲಾಗಿದೆ. ಅಲ್ಲದೆ, ವಿದ್ಯುತ್ ದೀಪಗಳ ಕಂಬಗಳಿಗೆ ಬಣ್ಣ ಬಳಿಯುವ ಕಾರ್ಯ ನಡೆದಿದೆ. ಮತ್ತೊಂದೆಡೆ ಗಜಪಡೆ, ಅಶ್ವಪಡೆಯು ಭಾರೀ ಶಬ್ದಕ್ಕೆ ಬೆದರದಂತೆ ಸಿಡಿಮದ್ದು ಸಿಡಿಸುವ ತಾಲೀಮು ಯಶಸ್ವಿಯಾ ಗಿದ್ದರೆ, ರಾಜಮನೆತನದವರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಡೆಸಿಕೊಡಲಿರುವ ಖಾಸಗಿ ದರ್ಬಾರ್‌ಗಾಗಿ ಅಂಬಾವಿಲಾಸ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆದಿದೆ.

ರಸ್ತೆಗಳಿಗೆ ದೀಪಾಲಂಕಾರ: ನಗರದ ಪ್ರಮುಖ ರಸ್ತೆಗಳಾದ ಸಯ್ಯಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆ, ಬಿ. ಎನ್. ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಇರ್ವಿನ್ ರಸ್ತೆ ಹಾಗೂ ಹೊರವಲಯದ ಪ್ರಮುಖ ಹೆದ್ದಾರಿಗಳಿಗೆ ದೀಪಾಲಂಕಾರ ಮಾಡಿ ದಿನನಿತ್ಯ ಟ್ರಯಲ್ ನಡೆಸಲಾಗುತ್ತಿದೆ. ಜೊತೆಗೆ ನಗರದ ಪ್ರಮುಖ ವೃತ್ತಗಳಾದ ಎಲ್‌ಐಸಿ ವೃತ್ತ, ರಾಮಸ್ವಾಮಿ ವೃತ್ತ, ಕೆ. ಆರ್. ವೃತ್ತ, ಚಾಮರಾಜ ವೃತ್ತ, ದೊಡ್ಡಕೆರೆ ಮೈದಾನ, ಜಯ ಚಾಮರಾಜ ವೃತ್ತ, ಗನ್‌ಹೌಸ್ ಸೇರಿದಂತೆ ನಾನಾ ಕಡೆ ವಿದ್ಯುತ್ ದೀಪಗಳ ಮೂಲಕ ಹಲವು ಸ್ವಾತಂತ್ರ್ಯ, ಸಾಮಾಜಿಕ ಹೋರಾಟಗಾರರ ಪ್ರತಿಕೃತಿಗಳನ್ನು ನಿರ್ಮಿಸುವ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ.

ಒಂದು ಲಕ್ಷ ಹೂವಿನ ಕುಂಡ: ನವರಾತ್ರಿಯ ವೇಳೆ ಕುಪ್ಪಣ್ಣ ಪಾರ್ಕ್‌ನಲ್ಲಿ ತೋಟಗಾರಿಕೆ ಇಲಾಖೆಯಿಂದ ನಡೆಯಲಿರುವ ದಸರಾ -ಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ಬಗೆಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಈ ಬಾರಿ ೩೫ರಿಂದ ೪೦ಕ್ಕೂ ಹೆಚ್ಚು ತಳಿಯ ವಿವಿಧ ಬಣ್ಣಗಳ ಹೂವಿನ ಹಾಗೂ ಅಲಂಕಾರಿಕ ಗಿಡಗಳು ನೋಡುಗರ ಮನಸೂರೆಗೊಳ್ಳಲಿವೆ. ಈಗಾಗಲೇ ನಾನಾ ನರ್ಸರಿಗಳಲ್ಲಿ ಹೂವು ಬಿಡುವ ಗಿಡಗಳನ್ನು ಪಾಟ್‌ಗಳಲ್ಲಿ ಬೆಳೆಸಲಾಗಿದೆ. ಜೈ ಜವಾನ್-ಜೈ ಕಿಸಾನ್ ಮಾದರಿ, ಸುವರ್ಣ ಕರ್ನಾಟಕ ಸಂಭ್ರಮದ ಮಾದರಿಯನ್ನು ಈ ಬಾರಿ ನಿರ್ಮಿಸಲಾಗುತ್ತಿದೆ. -ಲಪುಷ್ಪ ಪ್ರದರ್ಶನಕ್ಕೆ ಅಗತ್ಯವಾದ ಸಜ್ಜು ಮಾಡಿದ್ದು, ದಸರಾ ಉದ್ಘಾಟನೆಯ ದಿನ ಮೈಸೂರಿಗೆ ವಿಶೇಷ ಮೆರುಗು ನೀಡಲು ಸಿದ್ದತೆ ನಡೆದಿದೆ.

ಉತ್ತನಹಳ್ಳಿಯಲ್ಲಿ ಯುವ ದಸರಾ: ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯು ತ್ತಿದ್ದ ಯುವ ದಸರಾವನ್ನು ಈ ಬಾರಿ ಉತ್ತನಹಳ್ಳಿ ಸಮೀಪ ಆಯೋಜಿಸುತ್ತಿದ್ದು, ಖ್ಯಾತ ಸಂಗೀತ ದಿಗ್ಗಜರ ರಸ ಸಂಜೆ ಕಾರ್ಯಕ್ರಮ ನಿಗದಿಯಾಗಿ ರುವುದರಿಂದ ಯುವಕರು ಕಾತರದಿಂದ ಕಾದು ಕುಳಿತಿದ್ದರೆ, ಕುಸ್ತಿ ಪಂದ್ಯಾವಳಿಯಲ್ಲಿ ಸೆಣಸಾಟ ನಡೆಸಲು ಪೈಲ್ವಾನರು ತಯಾರಿ ಮಾಡಿಕೊಂಡಿದ್ದಾರೆ.

ಯಾವುದಕ್ಕೆ ಎಷ್ಟು ಖರ್ಚು?
ಗುಂಡಿ ಮುಚ್ಚಲು ೧. ೩೮ ಲಕ್ಷ ರೂ. ?
ರಾಜಮಾರ್ಗ ದುರಸ್ತಿ, ಬ್ಯಾರಿಕೇಡ್‌ಗೆ – ೮೦ ಲಕ್ಷ ರೂ. ?
ಫುಟ್‌ಪಾತ್ ದುರಸ್ತಿ, ರಸ್ತೆಗಳ ಅಭಿವೃದ್ಧಿ, ರಾಜಮಾರ್ಗ ಪೆಯಿಂಟಿಂಗ್, ವಾರ್ಡ್ ಗಳಲ್ಲಿ ಶುಚಿತ್ವ, ರಸ್ತೆ ವಿಭಜಕ, ಹಾರ್ಡಿಂಜ್ ಸರ್ಕಲ್ ಬಳಿ ಸೆಲ್ಛಿ ಪಾಯಿಂಟ್, ?

ಇತರೆ ೩. ೧೫ ಕೋಟಿ ರೂ. ? ೩ಡಿ ಪೇಟಿಂಗ್- ೬೦ ಲಕ್ಷ ರೂ.

ಮೊದಲ ಬಾರಿಗೆ ೩ಡಿ ಪೇಂಟಿಂಗ್ ದಸರಾ ಮಹೋತ್ಸವಕ್ಕೆ ಸಂಬಂಧಪಟ್ಟಂತೆ ನಗರದ ರಸ್ತೆಗಳ ಗುಂಡಿ ಮುಚ್ಚಿಸಲಾಗಿದೆ. ರಾಜಮಾರ್ಗದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗಿದೆ. -ಟ್ ಪಾತ್‌ನಲ್ಲಿ ಸ್ವಚ್ಛತಾ ಕಾರ್ಯವನ್ನು ಆರಂಭಿಸಲಾಗಿದೆ. ಇದೇ ಮೊದಲ ಬಾರಿಗೆ ಪ್ರಮುಖ ಮೂರು ರಸ್ತೆಗಳಿಗೆ ೩ಡಿ ಪೇಂಟಿಂಗ್ ಮಾಡಿಸಲಾಗುತ್ತಿದೆ.

ಅಶಾದ್ ಉರ್ ರೆಹಮಾನ್ ಷರೀಫ, ಆಯುಕ್ತರು, ನಗರಪಾಲಿಕೆ.

ಪ್ರಥಮ ಬಾರಿಗೆ ಡ್ರೋನ್ ಮೂಲಕ ವೀಕ್ಷಣೆಗೆ ಅವಕಾಶ ಮೈಸೂರಿನ ಹಸಿರು ಚಪ್ಪರ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿವಿಧ ಮಾದರಿಯ ಪ್ರತಿಕೃತಿಗಳನ್ನು ಅಳವಡಿಸುವ ಕಾರ್ಯ ಚುರುಕಿನಿಂದ ಸಾಗಿದೆ. ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಡ್ರೋನ್ ಮೂಲಕ ವೀಕ್ಷಣೆ ಮಾಡುವ ಅವಕಾಶ ಇರುವುದರಿಂದ ದೀಪಾಲಂಕಾರಕ್ಕೆ ಮತ್ತಷ್ಟು ಮೆರುಗು ಬರಲಿದೆ.

 ಕೆ. ಎಂ. ಮುನಿಗೋಪಾಲರಾಜು, ನಿರ್ದೇಶಕರು ಸೆಸ್ಕ್

 

Tags: