Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಓದುಗರ ಪತ್ರ| ಸಮಸ್ಯೆಗಳ ಸುಳಿಯಲ್ಲಿ ಮಂಡ್ಯದ ಅಂಡರ್ ಪಾಸ್

ಮಂಡ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿಯೇ ಸಾರ್ವಜನಿಕರು ಸುರಕ್ಷಿತವಾಗಿ ರಸ್ತೆ ದಾಟಲಿ ಎಂಬ ಉದ್ದೇಶದಿಂದ ಅಂಡರ್ ಪಾಸನ್ನು ನಿರ್ಮಿಸಲಾಗಿದೆ.

ಈ ಅಂಡರ್ ಪಾಸ್ ನಿರ್ಮಿಸಿ ೨೫ ವರ್ಷಗಳ ಮೇಲಾಗಿದ್ದು, ನಿರ್ವಹಣೆಯ ಕೊರತೆಯಿಂದಾಗಿ ಸಂಪೂರ್ಣ ಹದಗೆಟ್ಟುಹೋಗಿದೆ. ಅಲ್ಲದೆ ಇಲ್ಲಿನ ಅನೈರ್ಮಲ್ಯ ವಾತಾವರಣದಿಂದಾಗಿ ಸಾರ್ವ ಜನಿಕರು ತಿರುಗಾಡಲು ಪರದಾಡುವಂತಾಗಿದೆ. ಈ ಅಂಡರ್ ಪಾಸ್‌ನಲ್ಲಿ ಸರಿಯಾದ ವಿದ್ಯುತ್ ದೀಪಗಳಿಲ್ಲದೆ ರಾತ್ರಿಯಾದರೆ ಸಾರ್ವಜನಿಕರು ಓಡಾಡಲು ತೊಂದರೆ ಉಂಟಾಗಿದೆ. ಅಲ್ಲದೆ ಮಳೆಗಾಲ ದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಸಾರ್ವ ಜನಿಕರು ನೀರಿನಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

ಇನ್ನು ಕತ್ತಲಾಗುತ್ತಿದ್ದಂತೆಯೇ ಈ ಅಂಡರ್‌ಪಾಸ್ ಅನೈತಿಕ ಚಟುವಟಿಕೆಗಳ ತಾಣವಾಗಿ ಹೋಗಿರುತ್ತದೆ. ಮದ್ಯವ್ಯಸನಿಗಳು ಅಂಡರ್‌ಪಾಸ್ ನಲ್ಲಿ ನಿಂತು ಕುಡಿದು ಅನುಚಿತವಾಗಿ ವರ್ತಿಸುತ್ತಾರೆ. ಇದರಿಂದಾಗಿ ಮಹಿಳೆಯರು ಹಾಗೂ ಮಕ್ಕಳು ಈ ರಸ್ತೆಯಲ್ಲಿ ತಿರುಗಾಡಲು ಆತಂಕಪಡುವಂತಾಗಿದೆ.

ಅಂಡರ್‌ಪಾಸ್‌ನಲ್ಲಿರುವ ಇಷ್ಟೆಲ್ಲ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸಾರ್ವಜನಿಕರಿಂದ ದೂರುಗಳು ಸಲ್ಲಿಕೆಯಾಗುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಅಂಡರ್‌ಪಾಸ್‌ನಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು.
-ಜೆ. ಅನುಷ, ಪತ್ರಿಕೋದ್ಯಮ ವಿಭಾಗ, ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ.

Tags: