Mysore
19
overcast clouds

Social Media

ಗುರುವಾರ, 01 ಜನವರಿ 2026
Light
Dark

ಮುಡಾ ಪ್ರಕರಣ: ಸಿಬಿಐ ತನಿಖೆ ತಡೆಯಲು ಸಿಎಂ ಸಿದ್ದರಾಮಯ್ಯ ಮಾಸ್ಟರ್‌ ಪ್ಲಾನ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜನ ಪ್ರತಿನಿಧಿಗಳ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶ ನೀಡಿದ್ದು, ಇದೀಗ ತನಿಖೆಯಿಂದ ತಪ್ಪಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ ಎಂಬ ಅರೋಪಗಳು ಕೇಳಿ ಬಂದಿವೆ.

ಮುಡಾ ಹಗರಣದ ತನಿಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಿಬಿಐ ತನಿಖೆಯ ಸಂಕಷ್ಟ ಎದುರಾಗಿದ್ದು, ಸಿಬಿಐ ನೇರ ತನಿಖೆಯಿಂದ ಪಾರಾಗುವುದಕ್ಕೆ ಸಚಿವ ಸಂಪುಟವೇ ಅವರ ಬೆನ್ನಿಗೆ ನಿಂತಿದೆ.

ಮುಡಾ ಪ್ರಕರಣದಲ್ಲಿ ದೂರುದಾರ ಕೋರ್ಟ್‌ ಆದೇಶ ಪಡೆದು ನೇರವಾಗಿ ಸಿಬಿಐಗೆ ದೂರು ನೀಡಿದ್ದೆ ಆದ್ದಲ್ಲಿ ಆಗ ಮಾತ್ರ ಯಾವುದೇ ನಿಯಂತ್ರಣವಿಲ್ಲದೆ ಕೇಂದ್ರ ತನಿಖಾ ಸಂಸ್ಥೆ ತನಿಖೆ ನಡೆಸಲು ಪ್ರಾರಂಭಿಸುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಸಿಬಿಐ ಮುಕ್ತ ತನಿಖೆಗೆ ಇರುವ ಅವಕಾಶವನ್ನು ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ಇನ್ನು ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಮುಖ್ಯ ಕಾರ್ಯದರ್ಶಿಗಳ ಹತ್ತಿರ ಮಾಹಿತಿ ಕೇಳುತ್ತಿದ್ದರು. ಈ ವಿಚಾರದಿಂದ ಸರ್ಕಾರಕ್ಕೆ ಭಾರಿ ಮುಜಗರ ಉಂಟಾಗಿತ್ತು. ಆದ ಕಾರಣ ಸಚಿವ ಸಂಪುಟದಲ್ಲಿ ರಾಜ್ಯಪಾಲರು ಕೇಳುವ ಮಾಹಿತಿಗೆ ಸಿಎಸ್‌ ನೀಡುವಂತಿಲ್ಲ. ಅದರ ಬದಲಿಗೆ ಮುಖ್ಯ ಕಾರ್ಯದರ್ಶಿಗಳು ಸಚಿವ ಸಂಪುಟದ ಗಮನಕ್ಕೆ ತಂದು ಆ ನಂತರ ರಾಜ್ಯಪಾಲರಿಗೆ ಕ್ಯಾಬಿನೆಟ್‌ ಮುಖಾಂತರವೇ ಉತ್ತರ ಹೋಗಬೇಕು ಎಂದು ನಿರ್ಣಯ ಕೈಕೊಳ್ಳಲಾಗಿದೆ. ಅಲ್ಲದೇ ಮುಡಾ ಪ್ರಕರಣದಲ್ಲಿ ಸಿಬಿಐ ಮುಕ್ತ ತನಿಖಾ ಅವಕಾಶಕ್ಕೆ ತಡೆಯಾಗುವ ಮೂಲಕ ಸರ್ಕಾರದ ವಿರುದ್ಧ ಪತ್ರ ಸಮರ ಆರಂಭ ಮಾಡಿದ್ದ ರಾಜ್ಯಪಾಲರಿಗೂ ತಿರುಗೇಟು ನೀಡುವಂತೆ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

Tags:
error: Content is protected !!