ಉತ್ತರ ಪ್ರದೇಶ: ಸಾರ್ವಜನಿಕರು ಇನ್ನು ಮುಂದೆ ದೇವರಿಗೆ ಹೊರಗಿನಿಂದ ಖರೀದಿಸಿದ ಸಿಹಿ ತಿನಿಸುಗಳನ್ನು ಯಾವುದೇ ಕಾರಣಕ್ಕೂ ಅರ್ಪಿಸಬಾರದು ಎಂದು ಯುಪಿ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ.
ಕೇವಲ ತೆಂಗಿನಕಾಯಿ, ಹಣ್ಣುಗಳು, ಡ್ರೈಫ್ರೂಟ್ಸ್‌ಗಳನ್ನು ಮಾತ್ರವೇ ದೇವರಿಗೆ ಅರ್ಪಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ.
ತಿರುಪತಿ ದೇವಸ್ಥಾನದಲ್ಲಿನ ಲಾಡು ಪ್ರಕರಣದಂತೆ ನಮ್ಮಲ್ಲಿಯೂ ಆಗಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನೂ ಕೆಲವು ದೇವಸ್ಥಾನ ಆಡಳಿತ ಮಂಡಳಿಗಳು ತಾವೇ ಸಿಹಿ ತಿನಿಸು ತಯಾರಿಸುತ್ತೇವೆ ಎಂದು ಹೇಳಿದ್ದು, ಇದಕ್ಕಾಗಿಯೇ ದೇವಸ್ಥಾನದ ಆವರಣದಲ್ಲಿ ಅಂಗಡಿಗಳನ್ನು ತೆರೆಯುವ ಯೋಚನೆ ರೂಪಿಸಲಾಗಿದೆ ಎಂದು ತಿಳಿಸಿವೆ.