Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೈಸೂರು ಓನ್ ಕೇಂದ್ರಗಳಲ್ಲಿ ದಸರಾ ಚಲನಚಿತ್ರೋತ್ಸವದ ಪಾಸ್ ಲಭ್ಯ

ಸೇವಾ ಸಿಂಧು ಪೋರ್ಟಲ್, ಗ್ರಾಮ ಒನ್, ಕರ್ನಾಟಕ ಓನ್ ನಲ್ಲೂ ಲಭ್ಯ

ಮೈಸೂರು: ಮೈಸೂರು ದಸರಾ ಚಲನಚಿತ್ರೋತ್ಸವದ ಸಮಿತಿ 2024ರ ವತಿಯಿಂದ ದಸರಾ ಚಲನಚಿತ್ರೋತ್ಸವದ ಉದ್ಘಾಟನೆಯು ಅಕ್ಟೋಬರ್ 3 ರಂದು ನೆರವೇರಲಿದ್ದು, ಅಕ್ಟೋಬರ್ 4ರಿಂದ 10ರವರೆಗೆ ಚಲನಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಗ್ರಾಮಾಂತರ ಪ್ರದೇಶದಲ್ಲಿ ನಿನಿ ಪ್ರಿಯರಿಗೆ ಹಾಗೂ ಸಿನಿಮಾಸಕ್ತರಿಗೆ ಸುಲಭವಾಗಿ ಲಭ್ಯವಾಗುವಂತೆ
ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ಬಳಸಿ https://sevasindhuservices.karnataka.gov.in/directApply.do?serviceId=2310 ನೋಂದಣಿ ಮಾಡಿ ಪಾಸ್ ಬುಕಿಂಗ್ ಹಾಗೂ ಮಾಹಿತಿ ಪಡೆಯಬಹುದಾಗಿರುತ್ತದೆ.

ಕರ್ನಾಟಕದಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮ ಒನ್ ಮತ್ತು ನಗರ/ ಪಟ್ಟಣ ವ್ಯಾಪ್ತಿಯಲ್ಲಿ ಕರ್ನಾಟಕ ಒನ್ ಹಾಗೂ ಮೈಸೂರು ಓನ್ ಕೇಂದ್ರದ ಸೇವಾ ಪೋರ್ಟಲ್ ನಲ್ಲಿ ಯಾವುದೇ ನೊಂದಣಿ ಮಾಡದೇ ಅಗತ್ಯ ಮಾಹಿತಿ ನೀಡಿ ಸಿನಿಮಾ ಪಾಸ್ ಗಳನ್ನು ಪಡೆಯಬಹುದಾಗಿರುತ್ತದೆ.

ಚಲನಚಿತ್ರೋತ್ಸವ ಪಾಸ್ ದರ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರೀಕರಿಗೆ 300 ರೂಗಳಾಗಿರುತ್ತದ್ದು ಇತರರಿಗೆ 500 ರೂಗಳು ಆಗಿರುತ್ತದೆ.

ನಗರದ ದಟ್ಟ ಜನಸಂದಣಿ ಸ್ಥಳಗಳಾದ ನಗರದ ಕೆಎಸ್ ಆರ್ ಟಿಸಿ ಬಸ್ ಸ್ಟಾಂಡ್, ನಗರ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮೃಗಾಲಯದ ಎದುರಿನ ಪಾರ್ಕಿಂಗ್ ಆವರಣ, ಬಯಲು ರಂಗಮಂದಿರದ ಯುವ ಸಂಭ್ರಮದ ವೇದಿಕೆಯ ಆವರಣದಲ್ಲಿ ಪಾಸ್ ಪಡೆಯಲು ಅನುಕೂಲವಾಗುವಂತೆ kiosk ಗಳನ್ನು ಸಹಾ ಸ್ಥಾಪಿಸಲಾಗುತ್ತಿದೆ ಎಂದು ಚಲನಚಿತ್ರೋತ್ಸವ ಉಪ ಸಮಿತಿಯ ಉಪ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

52 ಕೇಂದ್ರಗಳಲ್ಲೂ ಪಾಸ್‌ ಲಭ್ಯ

ಮೈಸೂರು ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ 346 ಗ್ರಾಮ ಓನ್ ಕೇಂದ್ರಗಳು, ನಗರ ಹಾಗೂ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ 52 ಕರ್ನಾಟಕ ಓನ್ ಕೇಂದ್ರಗಳಲ್ಲಿಯೂ ಸಿನಿಮಾ ಪಾಸ್ ಗಳು ಸಿನಿಮಾಸ್ತರಿಗೆ ಲಭ್ಯವಿರುತ್ತದೆ.

Tags: