Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪ್ರಧಾನಿ ಮೋದಿ ವಿರುದ್ಧ ಆರ್‌ಎಸ್‌ಎಸ್‌ಗೆ ಪತ್ರ ಬರೆದ ಮಾಜಿ ಸಿಎಂ ಕ್ರೇಜಿವಾಲ್‌

ಹೊಸದಿಲ್ಲಿ: ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ಇಂದು ( ಸೆಪ್ಟೆಂಬರ್‌ 25 ) ಪ್ರಧಾನಿ ಮೋದಿ ವಿರುದ್ಧ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಪತ್ರ ಬರೆದಿದ್ದಾರೆ.

ಕ್ರೇಜಿವಾಲ್‌ ಈ ಪತ್ರದಲ್ಲಿ ಮೋದಿ ಅವರ ಕಾರ್ಯಗಳ ಕುರಿತು 5 ಪ್ರಶ್ನೆಗಳಿಗೆ ಹಾಗೂ ಬಿಜೆಪಿ ರಾಜಕೀಯ ಕುರಿತು ಉತ್ತರಗಳನ್ನು ಕೇಳಿದ್ದಾರೆ. ಅಲ್ಲದೇ ಬಿಜೆಪಿ ರಾಜಕೀಯ ದೇಶಕ್ಕೆ ಹಾನಿಕಾರವಾಗಿದ್ದು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಬಿಜೆಪಿಯ ನಡವಳಿಕೆ ಹೀಗೆಯೇ ಮುಂದುವರೆದರೆ ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವ ಕೊನೆಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಆರ್‌ಎಸ್‌ಎಸ್‌ನ ನಿವೃತ್ತಿ ವಯಸ್ಸಿನ ನಿಯಮವು ಬಿಜೆಪಿ ಪಕ್ಷದಲ್ಲಿ ಎಲ್‌.ಕೆ.ಅಡ್ವಾಣಿ ಹಾಗೂ ಮುರುಳಿ ಮನೋಹರ್‌ ಜೋಶಿಯಂತಹ ನಾಯಕರಿಗೆ ಅನ್ವಯಿಸುವಂತೆಯೇ ನರೇಂದ್ರ ಮೋದಿ ಅವರಿಗೂ ಅನ್ವಯಿಸುತ್ತದೆಯೋ ಅಥವಾ ಇಲ್ಲವೋ? ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ತಮ್ಮ ಪಕ್ಷಕ್ಕೆ ಆರ್‌ಎಸ್‌ಎಸ್‌ ಅಗತ್ಯವಿಲ್ಲ ಎಂದು ಹೇಳಿದಾಗ ಮೋಹನ್‌ ಭಾಗವತ್‌ ಅವರಿಗೆ ಹೇಗೆ ಅನಿಸಿತು? ಎಂಬುದನ್ನು ಉತ್ತರಿಸಬೇಕು ಎಂದು ಪ್ರಶ್ನಿಸಿದ್ದಾರೆ.

Tags: