Mysore
19
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ತಿರುಪತಿ ಲಡ್ಡು ವಿವಾದ: ಎಲ್ಲಾ ಬ್ರ್ಯಾಂಡ್‌ ತುಪ್ಪದ ಗುಣಮಟ್ಟ ಪರೀಕ್ಷೆಗೆ ಆದೇಶ

ಬೆಂಗಳೂರು: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿ ಕೊಬ್ಬು ಬಳಕೆ ವರದಿ ಎಲ್ಲಾ ಕಡೆ ಭಾರೀ ಚರ್ಚೆಯಾಗುತ್ತಿದ್ದು, ಈ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.

ರಾಜ್ಯದಲ್ಲಿ ಕೆಎಂಎಫ್‌ ತುಪ್ಪವನ್ನು ಹೊರತುಪಡಿಸಿ ಉಳಿದ ಬ್ರ್ಯಾಂಡ್‌ಗಳ ತುಪ್ಪ ಪರಿಶೀಲನೆಗೆ ಆದೇಶ ನೀಡಲಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಸೂಚನೆ ನೀಡಿದ್ದು, ಆಹಾರ ಉತ್ಪಾದನಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುವಂತೆ ಕಟ್ಟಾಜ್ಞೆ ಹೊರಡಿಸಿದ್ದಾರೆ.

ದೇವಸ್ಥಾನದಲ್ಲಿ ಕೊಡುವ ಪ್ರಸಾದಗಳ ಮಾದರಿ ಪರೀಕ್ಷೆ ನಡೆಸುವ ಬದಲು, ಅಲ್ಲಿ ಯಾವ ತುಪ್ಪ ಬಳಕೆ ಮಾಡುತ್ತಾರೆ ಎಂದು ತಿಳಿದು ಪರೀಕ್ಷೆ ನಡೆಸಿ ಎಂದು ಸೂಚನೆ ನೀಡಿದ್ದಾರೆ.

 

Tags:
error: Content is protected !!