ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ಎ2 ಆರೋಪಿ ನಟ ದರ್ಶನ್ ಹಾಗೂ ಎ1 ಆರೋಪಿ ಪವಿತ್ರ ಗೌಡ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ಮತ್ತೆ ವಿಸ್ತರಣೆ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ವಿಚಾರವಾಗಿ ವಿಚಾರಣೆ ನಡೆಸಿದ ಪೀಠವು, ಅರ್ಜಿಯನ್ನು ಕ್ರಮವಾಗಿ ಸೆ.27ಕ್ಕೆ ಹಾಗೂ ಸೆ.25ಕ್ಕೆ ಮುಂದೂಡಿದೆ.