Mysore
27
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಸಿಎಂ ಕುರ್ಚಿ ಖಾಲಿ ಬಿಟ್ಟ ಸಿಎಂ ಅತಿಶಿ

ನವದೆಹಲಿ: ದೆಹಲಿ ಸಿಎಂ ಆಗಿ ಎಎಪಿ ಪಕ್ಷದ ನಾಯಕಿ ಅತಿಶಿ ಮರ್ಲೇನಾ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಕಚೇರಿಯಲ್ಲಿ ಸಿಎಂ ಕುರ್ಚಿಯಲ್ಲಿ ಕೂರದೇ ಬೇರೊಂದು ಕುರ್ಚಿಯನ್ನು ತರಿಸಿಕೊಂಡು ಅಧಿಕಾರ ಸ್ವೀಕರಿಸುವ ಮೂಲಕ ತಮ್ಮ ಗುರು ಕೇಜ್ರಿವಾಲ್‌ಗೆ ಗೌರವ ತೋರಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಹಿಂದೂ ಕಾವ್ಯ ರಾಮಾಯಣದಲ್ಲಿ ಬರುವಂತೆ ಶ್ರೀರಾಮನು ವನವಾಸಕ್ಕೆ ಹೋದಾಗ ಅವರ ಅನುಪಸ್ಥಿತಿಯಲ್ಲಿ ಸಿಂಹಾಸನದಲ್ಲಿ ರಾಮನ ಪಾದುಕೆಯಿಟ್ಟು ಆಳ್ವಿಕೆ ಮಾಡಿದಂತೆಯೇ, ನಾನು ದೆಹಲಿ ಸಿಎಂ ಆಗಿ ಆಳ್ವಿಕೆ ಮಾಡುತ್ತೇನೆ. ಅಂದಿನ ಕಾಲದಲ್ಲಿ ಭರತ ಆಡಳಿತ ನಡೆಸಿದರೆ, ಇಂದಿನ ಭಾರತದಲ್ಲಿ ನಾನು ಮುಂಬರುವ ಚುನಾವಣೆಯವರೆಗೂ ಅಂದರೆ 4 ತಿಂಗಳವರೆಗೆ ಸರ್ಕಾರವನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ದೆಹಲಿ ಕುರ್ಚಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸೇರಿದ್ದು, ದೆಹಲಿಯಲ್ಲಿ ಮುಂಬರುವ ಚುನಾವಣೆಯಲ್ಲಿ ಕೇಜ್ರಿವಾಲ್‌ ಅವರನ್ನು ಸಾರ್ವಜನಿಕರು ಮತ್ತೊಮ್ಮೆ ಚುನಾಯಿಸಿ ಜನಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

 

Tags: