Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಅರುಣ ಕುಮಾರ ದಿಸ್ಸಾನಾಯಕ ಪ್ರಮಾಣ ವಚನ ಸ್ವೀಕಾರ

ಕೊಲಂಬೊ: ಶ್ರೀಲಂಕಾದ ಒಂಭತ್ತನೇ ಅಧ್ಯಕ್ಷರಾಗಿ ಎಡಪಂಥೀಯ ಪಕ್ಷದ ಅರುಣಾ ಕುಮಾರ ಡಿಸ್ಸಾನಾಯಕ ಅವರು ಆಯ್ಕಾಯಾಗಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶ್ರೀಲಂಕಾ ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಹಾಗೂ ಭ್ರಷ್ಠಾಚಾರವನ್ನು ತೊಡೆದು ಹಾಕುವ ಭರವಸೆಯ ಮಧ್ಯೆ 56ನೇ ವರ್ಷದ ಅನುರಾ ಅವರು, ರಾಷ್ಟ್ರಪತಿ ಕಾರ್ಯದರ್ಶಿ ಕಚೇರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರಿಂದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಶ್ರೀಲಂಕಾದಲ್ಲಿ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪರೆಮುನ ಪಕ್ಷದ ವಿಶಾಲ ರಂಗದ ನ್ಯಾಷನಲ್‌ ಪೀಪಲ್ಸ್‌ ಪವರ್‌ ನಾಯಕ , ತಮ್ಮ ಎದುರಾಳಿ ಪ್ರತಿಸ್ಪರ್ಧಿಯಾದ ಸಮಗಿ ಜನ ಬಲವೇಗಯ ಸಜಿತ್‌ ಪ್ರೇಮದಾಸ ಅವರನ್ನು ಸೋಲಿಸಿ, ವಿಜೇತರಾಗಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅನುರಾ ಅವರು ಮಾತನಾಡಿ, ಜನಾದೇಶವನ್ನು ಗೌರವಿಸಿದ್ದಕ್ಕಾಗಿ ಹಾಗೂ ಅಧಿಕಾರದ ಶಾಂತಿಯುತ ಹಸ್ತಾಂತರವನ್ನು ಸುಗಮಗೊಳಿಸಿದ್ದಕ್ಕಾಗಿ ಮಾಜಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರಿಗೆ ಧನ್ಯವಾದ ಸಲ್ಲಿಸಿದರು.

ಶ್ರೀಲಂಕಾದಲ್ಲಿ 2022ರ ದೇಶದ ಆರ್ಥಿಕ ಬಿಕ್ಕಟ್ಟು ಎದುರಿಸಿದ ಬಳಿಕ ಸಾಮೂಹಿಕ ಪ್ರತಿಭಟನೆಯಿಂದ ಗೋಟಾಬಯ ರಾಜಪಕ್ಸೆ ಅವರನ್ನು ಪದಚ್ಯುತಗೊಳಿಸಲಾಯಿತು. ಆ ನಂತರ ದೇಶದಲ್ಲಿ ಚುನಾವಣೆಗಳೆ ನಡೆದಿರಲಿಲ್ಲ. ಇದೇ ಪ್ರಥಮ ಬಾರಿಗೆ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯು ಶೆ.50ಕ್ಕಿಂತ ಅಧಿಕ ಮತಗಳನ್ನು ಪಡೆಯದೇ ಇರುವ ಕಾರಣ 2ನೇ ಸುತ್ತಿನ ಮತ ಎಣಿಕೆಗೆ ಚುನಾವಣಾ ಆಯೋಗ ಭಾನುವಾರ ಆದೇಶ ಹೊರಡಿಸಿತ್ತು. ಈ ಮತ ಎಣಿಕೆಯಲ್ಲಿ ಅನುಣಾ ಕುಮಾರ 1,05,264 ಪ್ರಾಶಸ್ತ್ಯಗಳೊಂದಿಗೆ 5.74 ಮಿಲಿಯನ್‌ ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ.

Tags: