Mysore
24
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ಅಶೋಕ್‌ ಮಂಡ್ಯದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ: ಆರೋಪ

ಮಂಡ್ಯ: ವಿಪಕ್ಷ ನಾಯಕ ಆರ್. ಅಶೋಕ್ ಅವರು ಜಿಲ್ಲೆಯ ಕೆಲವು ಸ್ಥಳಗಳನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಕೋಮುಗಲಭೆ ಸೃಷ್ಟಿಸಿ ಜಿಲ್ಲೆಯ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ನಾನು ದಲಿತರು ಮತ್ತು ಒಕ್ಕಲಿಗರ ಪರವಾಗಿ ಇದ್ದೇನೆ ಎಂದಿದ್ದಾರೆ ಆದರೆ ಶಾಸಕ ಮುನಿರತ್ನ ಅವರು ಒಕ್ಕಲಿಗರು ಮತ್ತು ದಲಿತರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಯಾಕೆ ಖಂಡಿಸಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಯ ಮೊದಲ ಅವಧಿಯ ಸರ್ಕಾರದಲ್ಲಿ ರಿಯಲ್ ಎಸ್ಟೇಟ್ಗೆ ಸಂಬಂಧಿಸಿದಂತೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬೆಂಗಳೂರು ಉತ್ತರವನ್ನು ,ಅಶೋಕ್ ಅವರು ಬೆಂಗಳೂರು ದಕ್ಷಿಣವನ್ನು ಹಂಚಿಕೊಂಡಿದ್ದಾರೆ. ಆಗಿನ ಬ್ರಹ್ಮಾಂಡ ಬ್ರಷ್ಟಾಚಾರವನ್ನು ಕಂಡಾಗ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಂಡುಬರುತ್ತದೆ. ಕಟ್ಟ ಸುಬ್ರಮಣ್ಯ ನಾಯ್ಡು ಅವರು ಜೈಲಿಗೆ ಹೋದರೆ ಅಶೋಕ್ ಅವರು ಚಾಣಾಕ್ಷತನದಿಂದ ಬಚಾವಾಗಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬೆಂಕಿ ಹಚ್ಚಲು ಅಶೋಕ ಮುಂದಾಗಿದ್ದಾರೆ

ಆರ್ ಅಶೋಕ್ ,ಸಿಟಿ ರವಿ, ಶೋಭಾ ಕರಂದ್ಲಾಜೆ ಅವರ ವಿರುದ್ಧ ಕೋಮು ಗಲಭೆಗೆ ಪ್ರಶೋದನೆ ನೀಡಿರುವ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಕೆರಗೋಡು ಮತ್ತು ಶ್ರೀರಂಗಪಟ್ಟಣದಲ್ಲಿ ನಡೆದ ಘಟನೆಯಂತೆ ನಾಗಮಂಗಲದಲ್ಲಿಯೂ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂದು ದೂರಿದರು.

ಒಗ್ಗಲಿಗ ಸ್ವಾಮೀಜಿ ಏಕೆ ಇದುವರೆಗೂ ಪ್ರತಿಕ್ರಿಯಿಸಿಲ್ಲ

ಶಾಸಕ ಮುನಿರತ್ನ ಅವರು ಸಮಾಜಕ್ಕೆ ಮಾರಕವಾಗಿದ್ದಾರೆ ಎನ್ನುವುದು ಜನತೆಗೆ ತಿಳಿದಿದೆ. ಅವರು ಒಕ್ಕಲಿಗ ಮತ್ತು ದಲಿತ ಸಮುದಾಯಕ್ಕೆ ನಿಂದನೆ ಮಾಡಿರುವ ಬಗ್ಗೆ ಇದುವರೆಗೂ ಒಕ್ಕಲಿಗ ಸ್ವಾಮೀಜಿಗಳು ಪ್ರತಿಕ್ರಿಯೆ ನೀಡಿಲ್ಲ.ಹಾಗಾಗಿ ಈ ಬಗ್ಗೆ ಸ್ವಾಮೀಜಿ ಧ್ವನಿ ಎತ್ತಬೇಕು ಎಂದು ತಾಕೀತು ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ನೀಲಾ, ಸೋನಿಯಾ ಬ್ರಿಗೇಡ್ ಜಿಲ್ಲಾಧ್ಯಕ್ಷೆ ವೀಣಾ ಶಂಕರ್ ,ನಗರ ಸಭೆ ಮಾಜಿ ಸದಸ್ಯ ನಾಗೇಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.

Tags:
error: Content is protected !!