Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಾಜ್ಯದಲ್ಲಿ ಶಾಲೆಗಳಿಗೆ ದಸರಾ ರಜೆ ಘೋಷಣೆ; ಎಂದಿನಿಂದ ರಜೆ? ಎಷ್ಟು ದಿನ?

ಬೆಂಗಳೂರು: ವಿಶ್ವ ವಿಖ್ಯಾತ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಅವರು ದಸರಾ ಉದ್ಘಾಟಿಸಲಿದ್ದಾರೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ. ಹೀಗೆ, ಸಕಲ ಸಿದ್ದತೆ ಭರದಿಂದ ಆರಂಭಿಸಿರುವ ರಾಜ್ಯ ಸರ್ಕಾರ, ಶಾಲಾ ಮಕ್ಕಳಿಗೆ ಈ ಬಾರಿಯ ದಸರಾ ರಜೆಯ ದಿನಾಂಕವನ್ನು ಘೋಷಿಸಿದೆ.

ನಾಡಹಬ್ಬ ದಸರಾ ಪ್ರಯುಕ್ತ ಅ.3ರಿಂದ 20ರವರೆಗೆ ದಸರಾ ರಜೆ ಘೋಷಿಸುವಂತೆ ಶಾಲಾ ಶಿಕ್ಷಣ ಇಲಾಖೆ ಮಾರ್ಗಸೂಚಿ ನೀಡಿ ಆದೇಶ ಹೊರಡಿಸಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಹಾಗೂ ಖಾಸಗಿ ಶಾಲೆಗಳಿಗೆ ಈ ರಜೆ ಅನ್ವಯವಾಗಲಿದೆ. ಆದರೆ, ಸಿಬಿಸಿಎಸ್‌ಇ ಹಾಗೂ ಐಎಸ್‌ಸಿಎಸ್‌ ಶಾಲೆಗಳಿಗೆ ಈ ರಜೆಗಳು ಅನ್ವಯವಾಗುವುದಿಲ್ಲ. ಏಕೆಂದರೆ ಅವು ಕೇಂದ್ರ ಪಠ್ಯಕ್ರಮದಡಿ ಕಾರ್ಯನಿರ್ವಹಿಸುವುದರಿಂದ ಆ ಶಾಲೆಗಳ ರಜೆಯ ದಿನಾಂಕ ಹಾಗೂ ಅವಧಿ ಬೇರೆಯಾಗಿರುತ್ತದೆ.

ಕಳೆದ ವರ್ಷ ಕರಾವಳಿ ಭಾಗದಲ್ಲಿ ದಸರಾ ರಜೆಯನ್ನು ಕೊಂಚ ಮಾರ್ಪಾಡು ಮಾಡಲಾಗಿತ್ತು. ಆದರೆ, ಈ ವರ್ಷ ಯಾವುದೇ ರೀತಿಯ ಬದಲಾವಣೆ ಮಾಡದೇ ಸಂಪೂರ್ಣ ರಾಜ್ಯದ ಎಲ್ಲಾ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ಜಾರಿಗೊಳಿಸಿದೆ.

ಶಾಲಾ ಶಿಕ್ಷಣ ಇಲಾಖೆ 2024-25ನೇ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಅವಧಿ ಮಾರ್ಗದರ್ಶಿಯನ್ನು ಪ್ರಾರಂಭದಲ್ಲೇ ಹೊರಡಿಸಿತ್ತು. ಅದರ ಅನುಸಾರ ಅಕ್ಟೋಬರ್‌ನಲ್ಲಿ 11 ದಿನಗಳು ಮಾತ್ರ ತರಗತಿ ನಡೆಸಿ 17 ದಿನ ದಸರಾ ರಜೆಯನ್ನು ಘೋಷಿಸಿದೆ.

ಅ.21 ರಿಂದ ಏಪ್ರಿಲ್‌ 10 ರವರೆಗೆ ಈ ವರ್ಷದ 2ನೇ ಶೈಕ್ಷಣಿಕ ಅವಧಿ ಪ್ರಾರಂಭವಾಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಹೇಳಿದೆ.

Tags: